ಮುರಿದು ಬೀಳುವ ಸ್ಥಿತಿಯಲ್ಲಿ ಕಂದ್ರಪ್ಪಾಡಿ ಅಂಚೆ ಕಚೇರಿ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 29. ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಂಚೆ ಕಚೇರಿಯ ಮೇಲ್ಚಾವಣಿಯು ತೀರಾ ಶಿಥಿಲಗೊಂಡಿದ್ದು, ಮುರಿದು ಬೀಳುವ ಹಂತಕ್ಕೆ ತಲುಪಿ, ಇದೀಗ ಇಲ್ಲಿನ ಸಿಬ್ಬಂದಿಗಳು ಭಯದಿಂದ ಕೆಲಸ ಕಾರ್ಯ ನಿರ್ವಹಿಸುವಂತಾಗಿದೆ.

 ಇಲಾಖೆ ಇದನ್ನು ದುರಸ್ತಿ ಮಾಡುವ ಬದಲು ಸ್ಥಳಾಂತರ ನಡೆಸುವ ಹುನ್ನಾರ ನಡೆಸುತ್ತಿದ್ದು, ಇಲಾಖೆಯ ಆದೇಶದಂತೆ ರಾಜೀವ್ ಗಾಂಧಿ ಸೇವಾಕೇಂದ್ರ ಮಾವಿನಕಟ್ಟೆ ಸ್ಥಳಾಂತರಗೊಳ್ಳಲಿದೆ ಎಂದು ಮಾಹಿತಿಯಿದೆ. ಬೇರೆಡೆ ಸ್ಥಳಾಂತರಿಸಿದರೆ ಈ ಭಾಗದ ಜನರಿಗೆ ತೊಂದರೆಯಾಗುತ್ತದೆ, ಮಾವಿನಕಟ್ಟೆಗೆ ಹೋಗಲು ವಾಹವದ ವ್ಯವಸ್ಥೆ ಸರಿಯಾಗಿಲ್ಲದೇ ಇರುವ ಕಾರಣ ಸರಕಾರದ ಹಲವಾರು ಯೋಜನೆಗಳಿಂದ ಜನ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಅಂಚೆ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Scroll to Top