ದುಬೈನ ಪ್ರಪ್ರಥಮ ಹಿಂದೂ ದೇವಾಲಯಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ದುಬೈ, ಫೆ.11. ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ದುಬೈನ ಮೊದಲ ಹಿಂದು ದೇವಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾನುವಾರದಂದು ಶಿಲಾನ್ಯಾಸ ನೆರವೇರಿಸಿದರು.

 

ಅಬುಧಾಬಿ-ದುಬೈ ರಾಷ್ಟ್ರಿಯ ಹೆದ್ದಾರಿಯಲ್ಲಿ ದುಬೈನ ಪ್ರಪ್ರಥಮ ಭವ್ಯವಾದ ಸ್ವಾಮಿ ನಾರಾಯಣ ದೇವಾಲಯ ನಿರ್ಮಾಣಕ್ಕೆ ದುಬೈ ಸರಕಾರ ಅನುಮತಿ ನೀಡಿದೆ. ಈ ವೇಳೆ ದುಬೈನ ಓಪೆರಾ ಹಾಲ್ ನಲ್ಲಿ ನೆರೆದಿದ್ದ ಸಾವಿರಾರು ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ‘ದಶಕಗಳ ನಂತರ ಭಾರತವು ಗಲ್ಫ್ ರಾಷ್ಟ್ರಗಳೊಂದಿಗೆ ಮತ್ತೆ ಬಲವಾದ ಸಂಬಂಧವನ್ನು ಹೊಂದಲು ಈ ದೇವಾಲಯವು ನೆರವಾಗಲಿದೆ’ ಎಂದರು. ನಾನು ನೋಟು ನಿಷೇಧ ಮಾಡಿದಾಗ ಬಡವರು ಅರ್ಥಮಾಡಿಕೊಂಡು ಬೆಂಬಲ ನೀಡಿದರು. ಆದರೆ ಆವಾಗ ನಿದ್ದೆ ಕಳೆದುಕೊಂಡವರು 2 ವರ್ಷಗಳಾದ ಮೇಲೂ ಕಣ್ಣೀರಿಡುತ್ತಿದ್ದಾರೆ’ ಎಂದು ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ನಾವು ದೂರದೃಷ್ಟಿ ಇರಿಸಿ ಯೋಜನೆಗಳನ್ನು ತರುತ್ತೇವೆ. ತಕ್ಷಣ ಅದರ ಪರಿಣಾಮ ಗೊತ್ತಾಗುವುದಿಲ್ಲ .70 ವರ್ಷಗಳ ಹಿಂದಿನ ನಿಯಮಗಳನ್ನು ಬದಲಾವಣೆ ಮಾಡಿದಾಗ ಸ್ವಲ್ಪ ಸಮಸ್ಯೆಗಳು ಆಗುವುದು ಸಹಜ. ಭಾರತ ದೇಶದ ಬದಲಾಗುತ್ತಿದ್ದು ನಿಮ್ಮ ಕನಸುಗಳು ಆಶೋತ್ತರಗಳು ಈಡೇರಿಸುವಲ್ಲಿ ನಾನು ಕೆಲಸ ಮುಂದುವರಿಸುತ್ತೇನೆ ಎಂದರು.

Also Read  ಈ ಬಾರಿಯ ಹಜ್ಜ್ ಗಾಗಿ ಕಟ್ಟಿದ ಶುಲ್ಕ ಮರುಪಾವತಿ ➤ ಕೇಂದ್ರ ಹಜ್ಜ್ ಕಮಿಟಿ ಸ್ಪಷ್ಟನೆ

error: Content is protected !!
Scroll to Top