ಪ್ರಾಣಕ್ಕೆ ಕಂಟಕವಾದ ಮೀನು ಸಾಗಾಟದ ಲಾರಿ – ಮೀನಿನ ಬಾಕ್ಸ್ ಬಿದ್ದು ಸ್ಕೂಟರ್ ಸವಾರ ಮೃತ್ಯು..!



(ನ್ಯೂಸ್ ಕಡಬ) newskadaba.com ಮಂಗಳೂರು, ಅ. 12. ಚಲಿಸುತ್ತಿದ್ದ ಮೀನಿನ ಲಾರಿಯಿಂದ ಕೆಳಕ್ಕೆ ಬಿದ್ದ ಮೀನಿನ ಬಾಕ್ಸ್‌ ಸ್ಕೂಟರ್‌ ಸವಾರನೊಬ್ಬನ ಪ್ರಾಣಕ್ಕೆ ಕಂಟಕವಾದ ಘಟನೆ ನಗರದ ಸಂಚಾರ ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.







ಅಝ್ವೀದ್‌ ಎಂಬಾತ ಸ್ಕೂಟರ್ ನಲ್ಲಿ ಮಂಗಳೂರು ಕಡೆಗೆ ನೇತ್ರಾವತಿ ಸೇತುವೆಯಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಅವರ ಎದುರಿನಲ್ಲಿದ್ದ ಮೀನು ಸಾಗಾಟದ ಲಾರಿಯಿಂದ ಬಾಕ್ಸ್‌ ಒಂದು ರಸ್ತೆಗೆ ಬಿದ್ದಿತ್ತು. ಇದನ್ನು ಗಮನಿಸಿದ ಲಾರಿ ಚಾಲಕ ನಿಶಾಮ್.ಪಿ ಎಂಬಾತ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಬ್ರೇಕ್‌ ಹಾಕಿ ವಾಹನ ನಿಲ್ಲಿಸಿದ ಪರಿಣಾಮ ಅಝ್ವೀದ್‌ ನ ಸ್ಕೂಟರ್ ನಿಯಂತ್ರಣ ತಪ್ಪಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಪಂಪ್‌ವೆಲ್‌ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಅಝ್ವೀರ್‌ ಅವರ ಸೋದರ ಅಫ್ರೀಜ್‌ ದೂರು ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.






error: Content is protected !!
Scroll to Top