ಹುಚ್ಚುನಾಯಿ ಕಡಿತ- ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಹಳೆಯಂಗಡಿ, . 09. ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಭಾನುವಾರದಂದು ಹಲವರಿಗೆ ಹುಚ್ಚು ನಾಯಿ ಕಡಿದಿರುವ ಕುರಿತು ವರದಿಯಾಗಿದೆ.

ಪಾದಾಚಾರಿಗಳ ಸಹಿತ ದ್ವಿಚಕ್ರ ವಾಹನ ಸವಾರರಿಗೆ ಹುಚ್ಚು ನಾಯಿ ಕಡಿದಿದ್ದು ಹುಚ್ಚು ನಾಯಿ ಹಾಗೂ ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಗ್ರಾಮ ಪಂಚಾಯತ್‌ ಗೆ ಆಗ್ರಹಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ಹಳೆಯಂಗಡಿ ಗ್ರಾಮ ಪಂಚಾಯತ್‌ ಇದರ ಬಗ್ಗೆ ಉಲ್ಲೇಖೀಸಿ ಬೀದಿ ನಾಯಿ ಹಾಗೂ ಹುಚ್ಚು ನಾಯಿಗಳ ಎಚ್ಚರಿಕೆಯ ಫಲಕವನ್ನು ಅಲ್ಲಲ್ಲಿ ಪ್ರಕಟಿಸಿತ್ತು.

Scroll to Top