ಮಂಗಳೂರು: ಟೆಂಪೋ ಟ್ರಾವೆಲರ್ ಕಳವು ಪ್ರಕರಣ- ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ನಗರದ ಕುಂಟಿಕಾನ ಫ್ಲೈ ಓವರ್ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಕುರಿತು ವರದಿಯಾಗಿದೆ.


ಬಂಧಿತ ಆರೊಪಿಗಳನ್ನು ಹೊರ ರಾಜ್ಯದವರಾದ ಅರೀಫ್ ಉಲ್ಲಾಖಾನ್, ಅಮಿತ್ ಬಾಹುಬಲಿ ಪಂಚೋಡಿ ಯಾನೆ ಬೇಬಿ ಹಾಗೂ ಸುರೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಟೆಂಪೋ ಟ್ರಾವೆಲ್ಲೆರ್‌ ನ್ನು ವಶಪಡಿಸಿಕೊಳ್ಳಲಾಗಿದೆ. ಸೆ. 14ರಂದು ರಾತ್ರಿ 8:30ಕ್ಕೆ ನಗರದ ಕುಂಟಿಕಾನ ಫ್ಲೈಓವರ್ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲ್ಲರ್ ವಾಹನ ಮರುದಿನ ಬೆಳಗ್ಗೆ ನೋಡಿದಾಗ ಕಳವಾಗಿತ್ತು. ಈ ಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು.

Scroll to Top