ಮಂಗಳೂರು NMPTಯಲ್ಲಿ ಉದ್ಯೋಗ- 60 ಸಾವಿರ ಮಾಸಿಕ ವೇತನ – ಇಂದೇ ಅಪ್ಲೈ ಮಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 20. ನವ ಮಂಗಳೂರು ಬಂದರು ಟ್ರಸ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1 ಎಂಜಿನಿಯರ್ ಗ್ರೇಡ್-2 ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ನವೆಂಬರ್ 21, 2023ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

ಹುದ್ದೆಯ ಕುರಿತು ಮಾಹಿತಿ:-
ಸಂಸ್ಥೆ- ನವ ಮಂಗಳೂರು ಬಂದರು ಟ್ರಸ್ಟ್,
ಹುದ್ದೆ- ಎಂಜಿನಿಯರ್ ಗ್ರೇಡ್-2
ಒಟ್ಟು ಹುದ್ದೆ- 1

ವೇತನ:
ನವ ಮಂಗಳೂರು ಬಂದರು ಟ್ರಸ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 60,000 ಸಂಬಳ ಕೊಡಲಾಗುತ್ತದೆ.

Also Read  ಶಕ್ತಿನಗರದ ಶಕ್ತಿ ವಸತಿ ಶಾಲೆ ➤ “ಸಂಸ್ಕೃತವು”ಒಂದು ಪಕ್ವಯುತ ಭಾಷೆ- ಪ್ರೊ.ಜನಾರ್ದನತಾಮ್ಹಾನ್ಕರ್

ಉದ್ಯೋಗದ ಸ್ಥಳ:
ನವ ಮಂಗಳೂರು ಬಂದರು ಟ್ರಸ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:
ಚೇಂಬರ್ ಆಫ್ ದಿ ಡೆಪ್ಯುಟಿ ಚೇರ್​ಮನ್
ನವ ಮಂಗಳೂರು ಬಂದರು ಪ್ರಾಧಿಕಾರ
ಪಣಂಬೂರು
ಮಂಗಳೂರು
ಕರ್ನಾಟಕ-575010.


ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 0824-2887265 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

 

error: Content is protected !!
Scroll to Top