ಸಿಸಿಬಿ ಕಚೇರಿಯಲ್ಲಿ ಕುಸಿದುಬಿದ್ದ ಚೈತ್ರಾ- ಆಸ್ಪತ್ರೆಗೆ ದಾಖಲು



(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 15. ವಿಧಾನಸಭೆ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಸಂಘ ಪರಿವಾರದ ನಾಯಕಿ ಚೈತ್ರಾ ಕುಂದಾಪುರ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ.







 

ಪೊಲೀಸರು ಚೈತ್ರಾ ಅವರನ್ನು ಇಂದು ಬೆಳಗ್ಗೆ ವಿಚಾರಣೆಗಾಗಿ ನಗರದ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತಂದಿದ್ದರು. ಈ ವೇಳೆ ಅಸ್ವಸ್ಥಗೊಂಡ ಚೈತ್ರಾ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣವೇ ಅವರನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೈತ್ರಾರಿಗೆ ಮೂರ್ಛೆ ರೋಗವಿತ್ತೆನ್ನಲಾಗಿದ್ದು, ಇದೇ ಕಾರಣದಿಂದ ಅವರು ಕುಸಿದಬಿದ್ದಿದ್ದಾರೆ ಎಂದು ತಿಳಿದುಬಂದಿದೆ.






error: Content is protected !!
Scroll to Top