ಜೇಸಿಐ ಕಡಬ ಕದಂಬದ ಜೇಸಿ ಸಪ್ತಾಹ‌ ‘ಕದಂಬೋತ್ಸವ-2023’ಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಜೇಸಿಐ ಭಾರತದ ವಲಯ 15ರ ಪ್ರತಿಷ್ಠಿತ ಘಟಕ ಜೇಸಿಐ ಕಡಬ ಕದಂಬದ ಜೇಸಿ ಸಪ್ತಾಹ ‘ಕದಂಬೋತ್ಸವ – 2023’ ಕಾರ್ಯಕ್ರಮದ ಉದ್ಘಾಟನೆ ಶನಿವಾರದಂದು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಸಪ್ತಾಹದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ, ಅಂಗಾಂಗ ದಾನ ಘೋಷಣಾ ಪತ್ರಕ್ಕೆ ಸಹಿ ಸಂಗ್ರಹ ಕಾರ್ಯಕ್ರಮವನ್ನು ವಲಯ ಉಪಾಧ್ಯಕ್ಷರಾದ ದೇವರಾಜ್ ಕುದ್ಪಾಜೆ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್ ಭಾಗವಹಿಸಿದ್ದರು. ಸಪ್ತಾಹದಲ್ಲಿ ಪಿಜಕ್ಕಳ ಅಂಗನವಾಡಿ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ, ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಕಲೆಯ ಬಗ್ಗೆ ತರಬೇತಿ ಕಾರ್ಯಾಗಾರ, ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಗೆ ದೇಣಿಗೆ ಹಸ್ತಾಂತರ, ಕಡಬ ಚರ್ಚ್ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ ವಿತರಣೆ, ಶ್ರಮಜೀವಿಗೆ ಗೌರವಾರ್ಪಣೆ ನಡೆಯಲಿದೆ. ಸೆಪ್ಟೆಂಬರ್ 16 ರಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಮೈದಾನದಲ್ಲಿ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಪೂರ್ವಾಧ್ಯಕ್ಷರುಗಳಿಗೆ ಗೌರವಾರ್ಪಣೆ ಹಾಗೂ ಕಡಬದ ಪ್ರಸಿದ್ಧ ವೈದ್ಯಾಧಿಕಾರಿ ಡಾ. ತ್ರಿಮೂರ್ತಿಯವರಿಗೆ ಕದಂಬಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ‌.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ‘ಡ್ಯಾನ್ಸ್ – ಡ್ಯಾನ್ಸ್ 2023’ ನಡೆಯಲಿದ್ದು, ವಿಜೇತರಿಗೆ ಪ್ರಥಮ ಬಹುಮಾನ 25,000/- ಹಾಗೂ ಕದಂಬ ಟ್ರೋಫಿ, ದ್ವಿತೀಯ ಬಹುಮಾನ 15,000/- ಹಾಗೂ ಕದಂಬ ಟ್ರೋಫಿ ಮತ್ತು ತೃತೀಯ ಬಹುಮಾನ 7,500/- ಹಾಗೂ ಕದಂಬ ಟ್ರೋಫಿ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9449450774, 8105400493, 7760134777, 9448446145, 9620438244 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group