ಯುವಕನೋರ್ವನಿಗೆ ಅಪರಿಚಿತ ತಂಡದಿಂದ ಹಲ್ಲೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಸೆ.11. ಯುವಕನೋರ್ವನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಈ ಕುರಿತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳದವರನ್ನು ನಿಸಾರ್ ಎಂದು ಗುರುತಿಸಲಾಗಿದೆ.

ನಿಸಾರ್ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಅಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ನಿಸಾರ್ ಅವರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ್ದು, ಇದೇ ಸಂದರ್ಭ ರಿಕ್ಷಾದ ಬಳಿ ತಲವಾರು ಹಿಡಿದುಕೊಂಡು ನಿಂತಿದ್ದ ಮೂವರ ಪೈಕಿ ಓರ್ವ ನಿಸಾರ್ ಗೆ ದಾಳಿ ಮಾಡುವಂತೆ ಹೇಳುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದುಷ್ಕರ್ಮಿಗಳ ಕೈಯಿಂದ ತಪ್ಪಿಸಿ ಓಡಿ ಹೋಗಿದ್ದು, ಸ್ನೇಹಿತನಿಗೆ ಕರೆ ಮಾಡಿ ತಿಳಿಸಿ ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

Scroll to Top