WWE ಸ್ಟಾರ್ ಬ್ರೇ ವ್ಯಾಟ್ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್ ಆ. 25. ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಸ್ಟಾರ್ ಬ್ರೇ ವ್ಯಾಟ್(36) ಅವರು ಹೃದಯಾಘಾತದಿಂದ ಗುರುವಾರದಂದು ನಿಧನರಾಗಿದ್ದಾರೆ ಎಂದು ಕಂಪನಿಯ ಸಿಸಿಒ ಪಾಲ್ “ಟ್ರಿಪಲ್ ಎಚ್” ಲೆವೆಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ.

ಇಎಸ್‌ಪಿಎನ್ ಪ್ರಕಾರ, ಬ್ರೇ ವ್ಯಾಟ್ ಅವರ ನಿಜವಾದ ಹೆಸರು ವಿಂಡ್‌ಹ್ಯಾಮ್ ರೋಟುಂಡಾ. ಆರೋಗ್ಯ ಸಮಸ್ಯೆಯೊಂದಿಗೆ ಬಳಲುತ್ತಿದ್ದ ಅವರು ಕಳೆದ ಹಲವಾರು ತಿಂಗಳುಗಳಿಂದ ಡಬ್ಲ್ಯೂ ಡಬ್ಲ್ಯೂಇ ನಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ. ವ್ಯಾಟ್ ಒಂದು ಬಾರಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್‌ ಶಿಪ್ ಮತ್ತು ಎರಡು ಬಾರಿ ಯುನಿವರ್ಸಲ್ ಚಾಂಪಿಯನ್‌ಶಿಪ್ ಸೇರಿದಂತೆ ಡಬ್ಲ್ಯೂ ಡಬ್ಲ್ಯೂಇ ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.

Also Read  ಕಡಬ: ತಾಯಿ ಹಾಗೂ ಮಗಳ ಮೇಲೆ ಆ್ಯಸಿಡ್ ಎರಚಿದ ಪ್ರಕರಣ ➤ ಆರೋಪಿಯ ಜಾಮೀನು ರದ್ದುಪಡಿಸಿದ ಹೈಕೋರ್ಟ್...! ? ಆರೋಪಿಯನ್ನು ಮರಳಿ ಜೈಲಿಗೆ ಕಳುಹಿಸುವಂತೆ ಕಡಬ ಪೊಲೀಸರಿಗೆ ಆದೇಶ

error: Content is protected !!
Scroll to Top