ಬೈಕ್ ಗಳ ನಡುವೆ ಢಿಕ್ಕಿ- ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಪಂಪ್ ವೆಲ್ ಬಳಿ ಭಾನುವಾರದಂದು ರಾತ್ರಿ ಸಂಭವಿಸಿದೆ.


ಮೃತರನ್ನು ಮೆಫಿನ್ ಥಾಮ್ಸ್ (25) ಎಂದು ಗುರುತಿಸಲಾಗಿದೆ. ಬೈಕೊಂದು ಇನ್ನೊಂದು ಬೈಕ್ ಗೆ ಹಿಂಬದಿನಿಂದ ಢಿಕ್ಕಿ ಹೊಡೆದಿದ್ದು, ಈ ವೇಳೆ ಮೆಫಿನ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Scroll to Top