ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಯಿಂದ ಹಣ ವಂಚನೆ..! – ದೂರು ದಾಖಲು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಆ.12. ಅಡಿಕೆ ಅಂಗಡಿಯಲ್ಲಿ ಅಡಿಕೆ ಮಾರಾಟ ಮಾಡಿ ಹಣದೊಂದಿಗೆ ಹಿಂತಿರುತ್ತಿದ್ದ ವ್ಯಕ್ತಿಯೊಬ್ಬರಿಗೆ ವೇಳೆ ಬೈಕ್ ನಲ್ಲಿ ಬಂದ ಯುವಕ ಯಾಮಾರಿಸಿದ ಹಣ ದೋಚಿದ ಘಟನೆ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ.

ಬೆಳ್ತಂಗಡಿ ತಾಲೂಕು ಪದ್ಮುಂಜದ ಸಮೀಪದ ಉಳಿಯ ನಿವಾಸಿ 65 ವರ್ಷ ಪ್ರಾಯದ ದೇವಪ್ಪ ಗೌಡ ಅವರು ವಂಚನೆಗೆ ಒಳಗಾದವರು ಎಂದು ತಿಳಿದುಬಂದಿದೆ. ನಾನು ನಿಮ್ಮ ಮಗಳ ಸಹಪಾಠಿ ಮೋಹನ್‌, ಕೆನರಾ ಬ್ಯಾಂಕ್‌ ಉದ್ಯೋಗಿ ಎಂದು ಹೇಳಿ ಮೋದಿಯವರು ಕೊರೊನಾ ಸಮಯದಲ್ಲಿ ಕಳಿಸಿಕೊಟ್ಟ ಹಣ ಬ್ಯಾಂಕಿನಲ್ಲಿ ಕೊಳೆಯುತ್ತಿದೆ. ಅದಕ್ಕೆ ಬ್ಯಾಂಕ್‌ ಪಾಸ್‌ ಪುಸ್ತಕ ಮತ್ತು ಆಧಾರ್‌ ಜೆರಾಕ್ಸ್‌ ತರಲು ಹೇಳಿ ಮುಂಗಡ 7 ಸಾವಿರ ರೂ. ಪಡೆದಿದ್ದು, ಜೆರಾಕ್ಸ್‌ ಪ್ರತಿಯೊಂದಿಗೆ ಹಿಂದಿರುಗಿದಾಗ ಬೈಕ್ ನೊಂದಿಗೆ ಯುವಕನೂ ನಾಪತ್ತೆಯಾಗಿದ್ದ ಎಂದು ವರದಿ ತಿಳಿಸಿದೆ.

Also Read  'ಯುಗಾದಿ ವೇಳೆಗೆ ಎಲ್ಲಾ ಗ್ಯಾರಂಟಿ ಹಣ ಬಿಡುಗಡೆಯಾಗಲಿದೆ'- ಶಾಸಕ ಕೆ.ಎಸ್ ಬಸವಂತಪ್ಪ

error: Content is protected !!
Scroll to Top