ಬೆಳ್ತಂಗಡಿ: ರಕ್ತ ಚಂದನ ಕಳ್ಳಸಾಗಣಿಕೆ – ಇಬ್ಬರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.ಕಂ ಬೆಳ್ತಂಗಡಿ, ಆ 12. ರಕ್ತ ಚಂದನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ 125 ಕೆ.ಜಿ ರಕ್ತಚಂದನವನ್ನು ವೇಣೂರು ವಲಯಾರಣ್ಯಧಿಕಾರಿ ನೇತೃತ್ವದ ತಂಡವು ವಶಕ್ಕೆ ಪಡೆದ ಘಟನೆ ವೇಣೂರು ಸಮೀಪ ಕರಿಮಣೇಲು ಎಂಬಲ್ಲಿ ನಡೆದಿದೆ ಎನ್ನಲಾಗಿದೆ.

ಆರೋಪಿತಗಳನ್ನು ಬಂಟ್ವಾಳ ಮಾವಿನಕಟ್ಟೆ ನಿವಾಸಿ ಖಾಲಿದ್ ಹಾಗೂ ಗುರುವಾಯನಕೆರೆ ನಿವಾಸಿ ದೀಕ್ಷಿತ್ ಅವರನ್ನು ಬಂಧಿಸಲಾಗಿದೆ.

ವೇಣೂರು ಕರಿಮಣೇಲು ಎಂಬಲ್ಲಿಂದ ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದರು. ಈ ವೇಳೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಲಯಾರಣ್ಯಧಿಕಾರಿ ಮಹೀಮ್ ಜನ್ನು ನೇತೃತ್ವದ ತಂಡ ಆರೋಪಿಗಳು ಸಹಿತ 125 ಕೆ.ಜಿ. ರಕ್ತಚಂದನ ಸಾಗಾಟಕ್ಕೆ ಬಳಸಿದ ವಾಹನ ವಶಕ್ಕೆ ‌ಪಡೆದಿದ್ದಾರೆ ಎಂದು ವರದಿಯಾಗಿದೆ.

Scroll to Top