ಇನ್ಮುಂದೆ ಕನ್ನಡದಲ್ಲೂ ಫೋನ್​ ಪೇ ಪೇಮೆಂಟ್​ ನೋಟಿಫಿಕೇಶನ್​

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಡಿಜಿಟಲ್​ ಪೇಮೆಂಟ್​ ಪ್ಲಾಟ್​​ ಫಾರ್ಮ್​​ನಲ್ಲಿ ಜನಸಾಮಾನ್ಯರ ಜನಪ್ರಿಯ ತಾಣವಾಗಿರುವ ಫೋನ್​ಪೇ ಇದೀಗ ಮತ್ತಷ್ಟು ವ್ಯಾಪಾರಿ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದ್ದು, ಈ ಹಿಂದೆ ವ್ಯಾಪಾರಿಗಳಿಗೆ ಗ್ರಾಹಕರ ಪೇಮೆಂಟ್​ ಇತಿಹಾಸವನ್ನು ಸುಲಭವಾಗಿ ತಿಳಿಯುವ ಉದ್ದೇಶದಿಂದ ಪಾವತಿ ಕುರಿತು ಸ್ಮಾರ್ಟ್​ ಸ್ಪೀಕರ್​ ನೋಟಿಫಿಕೇಶನ್​ ಅನ್ನು ಪರಿಚಯಿಸಿತು. ಇಷ್ಟು ದಿನ ಇಂಗ್ಲಿಷ್​ನಲ್ಲಿ ಈ ನೋಟಿಫಿಕೇಶನ್​ ಧ್ವನಿ ಕೇಳಿ ಬರುತ್ತಿತ್ತು. ಆದರೆ, ಇದೀಗ ಪ್ರಾದೇಶಿಕ ಭಾಷೆಗಳಲ್ಲೂ ಪರಿಚಯಿಸಿದೆ.

ಈ ಸ್ಮಾರ್ಟ್​ ಸ್ಪೀಕರ್​ ಇನ್ಮುಂದೆ ಹಣದ ವಾಹಿವಾಟಿನ ಮಾಹಿತಿಯನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗಿನಲ್ಲಿ ನೀಡಲು ಸಿದ್ಧವಾಗಿದೆ. ಶೀಘ್ರದಲ್ಲೇ ಮರಾಠಿ ಸೇರಿದಂತೆ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಯನ್ನು ಕಂಪನಿ ನಡೆಸಿದೆ.

ವರ್ನಾಕ್ಯುಲರ್​(ಭಾಷೆ) ವಾಯ್ಸ್​ ನೋಟಿಫಿಕೇಶನ್ ಮೂಲಕ ಇದೀಗ ವ್ಯಾಪಾರಿಗಳು ತಮ್ಮ ಗ್ರಾಹಕರ ಹಣದ ವಹಿವಾಟಿನ ಮಾಹಿತಿಯನ್ನು ತಮ್ಮ ಭಾಷೆಗಳಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಿಂದ ಅವರು ಪೇಮೆಂಟ್​ ಕುರಿತಾದ ವಿವರಗಳ ಧೃಢೀಕರಣಕ್ಕೆ ಗ್ರಾಹಕರ ಸ್ಕ್ರೀನ್​ ನಲ್ಲಿ ನೋಡುವ ಅವಶ್ಯಕತೆ ಎದುರಾಗುವುದಿಲ್ಲ. ಜೊತೆಗೆ ತಮ್ಮ ಭಾಷೆಗಳಲ್ಲೇ ಕೇಳುವುದರಿಂದ ಅವರಿಗೆ ಮತ್ತಷ್ಟು ಖಾತ್ರಿ ದೊರಕಲಿದೆ ಎಂದು ಸಂಸ್ಥೆ ತಿಳಿಸಿದೆ.

 

error: Content is protected !!

Join the Group

Join WhatsApp Group