ನೆರೆಮನೆ ನಿವಾಸಿಗಳ ನಡುವೆ ಜಗಳ – ನಾಲ್ವರ ವಿರುದ್ದ ಪ್ರಕರಣ ದಾಖಲು



(ನ್ಯೂಸ್ ಕಡಬ) newskadaba.com ವಿಟ್ಲ, ಆ. 08. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿರುವ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಝೈನುಲ್ ಆಬಿದ್ ಎಂಬವರ ಪತ್ನಿ ವಿಟ್ಲ ಪೊಲೀಸರಿಗೆ ನೀಡಿರುವ ದೂರಿನಂತೆ, ಅದೇ ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ನಾಲ್ವರ ವಿರುದ್ದ ದೂರ ದಾಖಲಾಗಿದೆ.






ದೂರಿನ ಪ್ರಕಾರ, ದೂರುದಾರ ಮಹಿಳೆ ತನ್ನ ತವರು ಮನೆಗೆ ಹೋಗಲೆಂದು ಹೊರಡುತ್ತಿದ್ದ ಸಂದರ್ಭ ನೆರೆಮನೆಯ ಮಹಿಳೆಯೋರ್ವರು ತನ್ನ ಮಗಳಿಗೆ ಬೈಯುತ್ತಿದ್ದರು. ಈ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಅಲ್ಲದೇ ಆಕೆಯ ಮಾವ ತನ್ನ ಬುರ್ಕಾವನ್ನು ಹರಿದಿದ್ದಲ್ಲದೇ, ಕೆಳಕ್ಕೆ ಬಿದ್ದ ನನಗೆ ಆಕೆ ಮತ್ತು ಆಕೆಯ ತಾಯಿ ಕಾಲಿನಿಂದ ತುಳಿದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ.

error: Content is protected !!
Scroll to Top