ಜೂಜಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ; 24 ಮಂದಿ ಅರೆಸ್ಟ್- 9 ಲಕ್ಷ ರೂ. ಮೌಲ್ಯದ ಸೊತ್ತು ವಶ



(ನ್ಯೂಸ್ ಕಡಬ) newskadaba.com ಉಡುಪಿ. 07.  ಜೂಜು ಕೇಂದ್ರದ ಮೇಲೆ ದಾಳಿ ನಡೆಸಿದ ಪೊಲೀಸರು  24 ಮಂದಿಯನ್ನು ಬಂಧಿಸಿ 9 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಕೋಟದಿಂದ ವರದಿಯಾಗಿದೆ.







ಶನಿವಾರದಂದು ಸಂಜೆ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಗುಡ್ಡೆಯಂಗಡಿ ಕ್ರಾಸ್ ಬಳಿಯ ವಿನಾಯಕ ಸಭಾಂಗಣದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಟ ಪಿಎಸ್ಐ ಶಂಬುಲಿಂಗಯ್ಯ ಮತ್ತಿತರರ ತಂಡ ದಾಳಿ ನಡೆಸಿ 24 ಮಂದಿಯನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 9,77,260 ರೂ. ಎಂದು ಅಂದಾಜಿಸಲಾಗಿದೆ.






ವಶಪಡಿಸಿಕೊಂಡ ಸೊತ್ತುಗಳಲ್ಲಿ 1,49,680 ರೂಪಾಯಿ ನಗದು, 52 ಜೂಜಾಟದ ಎಲೆಗಳು, 3 ಸ್ಟೀಲ್ ಟೇಬಲ್ ಗಳು, ಪ್ಲಾಸ್ಟಿಕ್ ಕುರ್ಚಿಗಳು – 24, 3 ಕಾರುಗಳು, 2 ಮೋಟಾರ್ ಬೈಕ್‌ಗಳು, 2 ಸ್ಕೂಟರ್ ಮತ್ತು ಟೇಬಲ್ ಕ್ಲಾತ್ ಸೇರಿವೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top