ಹಳಿ ತಪ್ಪಿದ ರೈಲು – 15 ಮಂದಿ ಮೃತ್ಯು, 40ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ರಾವಲ್ಪಿಂಡಿ, . 07. ಹಜಾರಾ ಎಕ್ಸ್‌ ಪ್ರೆಸ್ ರೈಲಿನ ಹಲವು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಶೆಹಜಾದ್ ಪುರ ಮತ್ತು ನವಾಬ್ ಶಾ ನಡುವಿನ ಸರ್ಹರಿ ರೈಲು ನಿಲ್ದಾಣದ ಬಳಿ ನಡೆದಿದೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಹಲವು ಪ್ರಯಾಣಿಕರು ಬೋಗಿಗಳಲ್ಲಿ ಸಿಲುಕಿದ್ದಾರೆ. ಅಪಘಾತವಾದ ರೈಲು ಕರಾಚಿಯಿಂದ ಪಾಕಿಸ್ತಾನದ ಪಂಜಾಬ್‌ ಗೆ ಹೊರಟಿತ್ತು. ಗಾಯಗೊಂಡವರನ್ನು ಕೂಡಲೇ ನವಾಬ್ ಶಾದಲ್ಲಿರುವ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹೆಚ್ಚಿನ ರಕ್ಷಣಾ ತಂಡಗಳನ್ನು ಮತ್ತು ಪರಿಹಾರ ರೈಲನ್ನು ಕಳುಹಿಸಲಾಗಿದೆ ಎಂದು ಸ್ಥಳೀಯ ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.

Also Read  ಕರ್ತವ್ಯ ಲೋಪ ಹಿನ್ನೆಲೆ..! ➤ ವಲಯಾರಣ್ಯಧಿಕಾರಿ ಶಿಲ್ಪಾ ಎಸ್.ಎಲ್ ಅಮಾನತು 

error: Content is protected !!
Scroll to Top