ಲಾರಿ ತಡೆದು 1.64 ಲಕ್ಷ ರೂ. ದರೋಡೆ: ದೂರು ದಾಖಲು



(ನ್ಯೂಸ್ ಕಡಬ) newskadaba.com ಮಂಜೇಶ್ವರ, ಅ. 16. ಲಾರಿ ತಡೆದು ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ 1.64 ಲಕ್ಷ ರೂ. ದರೋಡೆ ಗೈದ ಘಟನೆ ಇಂದು ಮುಂಜಾನೆ ಪೈವಳಿಕೆ ಸಮೀಪದ ಅಟ್ಟೆಗೋಳಿಯಲ್ಲಿ ನಡೆದಿದೆ.







ಮೀನು ತರಲು ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಲಾರಿ ಚಾಲಕ ಯೂಸಫ್ ನನ್ನು ತಡೆದು ಚಾಕು ತೋರಿಸಿ ಹಣವನ್ನು ದರೋಡೆ ಮಾಡಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೋಲಿಸರು ತನಿಖೆ ಆರಂಭಿಸಿದ್ದು, ಸಿ ಸಿ ಟಿ ವಿ ಕ್ಯಾಮರಾ ತಪಾಸಣೆ ನಡೆಸಿದ್ದಾರೆ.






 

 

error: Content is protected !!
Scroll to Top