ಸುಳ್ಯ: ಮಸೂದ್ ಹತ್ಯೆ ಪ್ರಕರಣ – ಓರ್ವನಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ)newskadaba.com ಸುಳ್ಯ, ಆ.04. ಮಸೂದ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯೋರ್ವನಿಗೆ ಜಾಮೀನು ಸಿಕ್ಕಿದೆ ಎಂದು ತಿಳಿದುಬಂದಿದೆ. 8ನೇ ಆರೋಪಿಯಾಗಿರುವ ಭಾಸ್ಕರ್ ಕೆ.ಎಂ.ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿರುವ ಬಗ್ಗೆ ವರದಿಯಾಗಿದೆ.

ಪ್ರಕರಣದ 8ನೇ ಆರೋಪಿಯಾಗಿರುವ ಭಾಸ್ಕರ ಕೆ.ಎಂ. ಜಾಮೀನು ಕೋರಿ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದು ಆ.3 ರಂದು ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿರುವುದಾಗಿ ತಿಳಿದು ಬಂದಿದೆ. 2022ರಲ್ಲಿ ಕಳಂಜದಲ್ಲಿ 8 ಮಂದಿ ಗೂಂಡಾಗಳ ತಂಡ ಮಸೂದ್ ಗೆ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ‌ ಆರೋಪಿಗಳನ್ನು ಬೆಳ್ಳಾರೆ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

 

Scroll to Top