ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗೆ ಮೇಲ್ಮನವಿ ಹೋಗಬೇಕು..! – ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಮಳೆ ಪೀಡಿತ ಕರಾವಳಿ ಜಿಲ್ಲೆಗಳ ವೀಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸಿದ್ದರು.  ಸುದ್ದಿಗಾರರೊಂದಿಗೆ ಮಾತಾಡಿದ ಅವರು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸೌಜನ್ಯ ಹತ್ಯೆ ಪ್ರಕರಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದೆ. ಅದರೆ ಸೌಜನ್ಯಳ ಪೋಷಕರು ತನಿಖೆಯಿಂದ ಸಂತುಷ್ಟರಾಗಿಲ್ಲ, ಹಾಗಾಗಿ ಅವರು ಮರುತನಿಖೆ ಕೋರಿದ್ದಾರೆ. ಅದಕ್ಕಾಗಿ ಅವರು ಕೋರ್ಟ್ ಗೆ ಅಪೀಲ್ ಮಾಡಬೇಕಾಗುತ್ತದೆ. ಕಾನೂನಲ್ಲಿ ಯಾವುದಕ್ಕೆಲ್ಲ ಅವಕಾಶವಿದೆ ಅಂತ ನೋಡಬೇಕಾಗುತ್ತದೆ ಎಂದು ಹೇಳಿದರು. ಪ್ರಕರಣದಲ್ಲಿ ಸಿಬಿಐ ವರದಿಯನ್ನು ಈಗಾಗಲೇ ತಮಗೆ ತಲುಪಿಸಲಾಗಿದ್ದರೂ ಇನ್ನೂ ಓದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Scroll to Top