ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳನ್ನು ನೀಡಿದ ಕೇಂದ್ರ ಬಜೆಟ್

ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ

►ವಿಸಿಎಫ್ (ವೆಂಚರ್ ಕ್ಯಾಪಿಟಲ್ ಫಂಡ್)ಗಳು ಮತ್ತು ಆ್ಯಂಜೆಲ್ ಇನ್‌ವೆಸ್ಟರ್‌ಗಳ ಬೆಳವಣಿಗೆಗೆ ನೂತನ ಕ್ರಮಗಳು ಮತ್ತು ಹೂಡಿಕೆಯನ್ನು ಹೆಚ್ಚಿಸುವುದಕ್ಕಾಗಿ ನೂತನ ತೆರಿಗೆ ನಿಯಮಗಳು.

►ಫೋನ್‌ಗಳು ಮತ್ತು ಟಿವಿಗಳು ಸೇರಿದಂತೆ ಆಮದಿತ ಇಲೆಕ್ಟ್ರಾನಿಕ್ಸ್ ಉಪಕರಣಗಳು ದುಬಾರಿಯಾಗಲಿವೆ. ಮೊಬೈಲ್ ಫೋನ್‌ಗಳ ಮೇಲಿನ ಕಸ್ಟಮ್ ಸುಂಕವನ್ನು 15 ಶೇ.ದಿಂದ 20 ಶೇ.ಕ್ಕೆ ಹಾಗೂ ಕೆಲವು ಮೊಬೈಲ್ ಭಾಗಗಳ ಕಸ್ಟಮ್ ಸುಂಕವನ್ನು 15 ಶೇ.ಕ್ಕೆ ಮತ್ತು ಟಿವಿಗಳ ಕೆಲವು ಭಾಗಗಳ ಕಸ್ಟಮ್ ತೆರಿಗೆಯನ್ನು 15 ಶೇ.ಕ್ಕೆ ಏರಿಸಲು ಸರಕಾರ ಉದ್ದೇಶಿಸಿದೆ.

►ಆರೋಗ್ಯ ಮತ್ತು ಶಿಕ್ಷಣ ಸೆಸ್‌ನ್ನು 4 ಶೇ.ಕ್ಕೆ ಏರಿಸಲು ಪ್ರಸ್ತಾಪ.

ವೈಯಕ್ತಿಕ/ಕಾರ್ಪೊರೇಟ್ ತೆರಿಗೆ

►ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ.

►ವೇತನದಾರರಿಗೆ ತೆರಿಗೆ ವಿನಾಯಿತಿ: ಸಾರಿಗೆ ಮತ್ತು ವೈದ್ಯಕೀಯ ಮರುಪಾವತಿಯ ಸ್ಟಾಂಡರ್ಡ್ ಡಿಡಕ್ಷನ್ (ಕಡಿತ) ಮಿತಿ 15,000 ರೂ.ಯಿಂದ 40,000 ರೂ.ಗೆ ಏರಿಕೆ.

►ಮೆಡಿಕ್ಲೇಮ್‌ನಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ 50,000 ರೂ. ಹೆಚ್ಚುವರಿ ಅನುಕೂಲ.

►ಸ್ಟಾಕ್‌ನಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ದೀರ್ಘಾವಧಿ ಕ್ಯಾಪಿಟಲ್ ಗೇನ್ ಮೇಲೆ 10 ಶೇ. ತೆರಿಗೆ ವಿಧಿಸುವ ಪ್ರಸ್ತಾಪ.

►ರೈತ ಉತ್ಪಾದಕ ಕಂಪೆನಿಗಳೆಂದು ನೋಂದಾಯಿಸುವ ಹಾಗೂ ವಾರ್ಷಿಕ ವ್ಯವಹಾರ 100 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿರುವ ಕಂಪೆನಿಗಳಿಗೆ ಮೊದಲ 5 ವರ್ಷಗಳಲ್ಲಿ 100 ಶೇ. ತೆರಿಗೆ ವಿನಾಯಿತಿ.

►ಈ ವರ್ಷ 41 ಶೇ. ಹೆಚ್ಚು ರಿಟರ್ನ್ (ಆದಾಯ ವಿವರಗಳು)ಗಳ ಸಲ್ಲಿಕೆಯಾಗಿದ್ದು, ಹೆಚ್ಚು ಜನರು ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

►ತೆರಿಗೆದಾರರ ಪ್ರಮಾಣವು 2014-15ರ ಅವಧಿಯಲ್ಲಿದ್ದ 6.47 ಕೋಟಿಗಿಂತ 2016-17ರ ಅವಧಿಯಲ್ಲಿ 8.27 ಕೋಟಿಗೆ ಹೆಚ್ಚಿದೆ. ಹೆಚ್ಚು ತೆರಿಗೆದಾರರು ತೆರಿಗೆ ವ್ಯಾಪ್ತಿಗೆ ಬರುತ್ತಿದ್ದಾರೆ, ಆದರೆ ವ್ಯವಹಾರ ಪ್ರೋತ್ಸಾಹದಾಯಕವಾಗಿಲ್ಲ.

Also Read  ಕರ್ನಾಟಕ ಸಂಗೀತ ದಿಗ್ಗಜ ಪಿ.ಎಸ್. ನಾರಾಯಣಸ್ವಾಮಿ ನಿಧನ

►ನೋಟು ನಿಷೇಧವನ್ನು ಪ್ರಾಮಾಣಿಕ ತೆರಿಗೆ ಪಾವತಿದಾರರು ‘ಇಮಾಂದಾರಿ ಕಾ ಉತ್ಸವ್’ (ಪ್ರಾಮಾಣಿಕತೆಯ ಉತ್ಸವ)ವನ್ನಾಗಿ ಸ್ವೀಕರಿಸಿದ್ದಾರೆ.

ವಿತ್ತೀಯ ಕೊರತೆ

►2017-18ರ ಪರಿಷ್ಕೃತ ವಿತ್ತೀಯ ಕೊರತೆ ಅಂದಾಜು ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ 3.5 ಶೇ. ಹಾಗೂ 2018-19ರ ಅಂದಾಜು 3.3 ಶೇ.

ಟೆಲಿಕಾಂ

►2018-19ರಲ್ಲಿ 5 ಕೋಟಿ ಗ್ರಾಮೀಣ ಜನರಿಗೆ ಇಂಟರ್‌ನೆಟ್ ಒದಗಿಸಲು 5 ಲಕ್ಷ ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಸರಕಾರ ನಿರ್ಧಾರ.

►2018-19ರಲ್ಲಿ ಟೆಲಿಕಾಂ ಮೂಲಸೌಕರ್ಯ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಸರಕಾರದಿಂದ 10,000 ಕೋಟಿ ರೂ.

►ಐಐಟಿ ಮೆಡ್ರಾಸ್‌ನಲ್ಲಿ ಸ್ವದೇಶಿ 5ಜಿ ಕೇಂದ್ರ ಸ್ಥಾಪಿಸಲು ದೂರಸಂಪರ್ಕ ಇಲಾಖೆಯಿಂದ ಬೆಂಬಲ.

►ಬಿಟ್ ಕಾಯಿನ್ ಮುಂತಾದ ಕ್ರಿಪ್ಟೊಕರೆನ್ಸಿಗಳನ್ನು ಸರಕಾರ ಅಧಿಕೃತ ಕರೆನ್ಸಿಯಾಗಿ ಪರಿಗಣಿಸುವುದಿಲ್ಲ.

ರೈಲು ಬಜೆಟ್

►2018-19ರಲ್ಲಿ ಭಾರತೀಯ ರೈಲ್ವೆಯ ಒಟ್ಟು ವೆಚ್ಚ 1,48,528 ಕೋಟಿ ರೂ. ಎಲ್ಲ ರೈಲುಗಳಲ್ಲಿ ಹಂತ ಹಂತವಾಗಿ ವೈಫೈ, ಸಿಸಿಟಿವಿ ಮತ್ತು ಇತರ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲಾಗುವುದು.

►25,000ಕ್ಕಿಂತ ಅಧಿಕ ಜನರು ಪ್ರವೇಶಿಸುವ ಎಲ್ಲ ರೈಲು ನಿಲ್ದಾಣಗಳಿಗೆ ಎಸ್ಕಲೇಟರ್‌ಗಳನ್ನು ಒದಗಿಸಲಾಗುವುದು.

►12,000 ವ್ಯಾಗನ್‌ಗಳು, 5160 ಕೋಚ್‌ಗಳು ಮತ್ತು 700 ಲೊಕೊಮೋಟಿವ್ (ಎಂಜಿನ್)ಗಳನ್ನು ಒದಗಿಸಲಾಗುವುದು. ಭೌತಿಕ ಗುರಿಗಳ ಸಾಧನೆಯಲ್ಲಿ ರೈಲ್ವೆ ಇಲಾಖೆಯು ಗಮನಾರ್ಹ ಯಶಸ್ಸು ಪಡೆದಿದೆ: ಅರುಣ್ ಜೇಟ್ಲಿ

►ಸುರಕ್ಷತೆ, ರೈಲು ಹಳಿಗಳ ನಿರ್ವಹಣೆ, ತಂತ್ರಜ್ಞಾನ ಬಳಕೆಯಲ್ಲಿ ಹೆಚ್ಚಳ ಮತ್ತು ಮಂಜು ವೀಕ್ಷಣೆ ಉಪಕರಣಗಳಿಗೆ ಹೆಚ್ಚಿನ ಗಮನ ನೀಡಲಾಗುವುದು: ಜೇಟ್ಲಿ

►600 ಪ್ರಮುಖ ರೈಲು ನಿಲ್ದಾಣಗಳ ನವೀಕರಣ ಕೈಗೆತ್ತಿಕೊಳ್ಳಲಾಗಿದೆ; ಮುಂಬೈ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ; ಬೆಂಗಳೂರಿನಲ್ಲಿ 160 ಕಿ.ಮೀ. ಉಪನಗರ ರೈಲು ಜಾಲಕ್ಕೆ ಯೋಜನೆ: ಜೇಟ್ಲಿ

Also Read  ಜಮ್ಮು-ಕಾಶ್ಮೀರದಲ್ಲಿ ಇಂದು ಮೊದಲ ಹಂತದ ಚುನಾವಣೆ- ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮೋದಿ ಮನವಿ

►ಬುಲೆಟ್ ರೈಲಿಗೆ 2017ರ ಸೆಪ್ಟಂಬರ್‌ನಲ್ಲಿ ಶಂಕುಸ್ಥಾಪನೆ. ಹೈಸ್ಪೀಡ್ ರೈಲ್ವೆ ಯೋಜನೆಗಳಿಗೆ ಅಗತ್ಯವಾದ ಸಿಬ್ಬಂದಿಗೆ ತರಬೇತಿ ನೀಡಲು ವಡೋದರದಲ್ಲಿ ಸಂಸ್ಥೆಯೊಂದರ ಸ್ಥಾಪನೆ: ಜೇಟ್ಲಿ

ಕೃಷಿ

►ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 2000 ಕೋಟಿ ರೂಪಾಯಿ ಮೂಲಧನದೊಂದಿಗೆ ಕೃಷಿ-ಮಾರುಕಟ್ಟೆ ಅಭಿವೃದ್ಧಿ ನಿಧಿ ಸ್ಥಾಪನೆ.

►ಗ್ರಾಮೀಣ್ ಕೃಷ್ಟಿ ಮಾರುಕಟ್ಟೆ (ಗ್ರಾಮ್) ಮೂಲಕ ರೈತರು ತಮ್ಮ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಬಹುದು.

►ಕಡಿಮೆ ವೆಚ್ಚದ ಕೃಷಿ ಮತ್ತು ಹೆಚ್ಚಿನ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೆ ಒತ್ತು. ರೈತರಿಗೆ ಕೃಷಿ ಮತ್ತು ಕೃಷಿಯೇತರ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ.

►ಖಾರಿಫ್ ಬೆಲೆಗೆ ಉತ್ಪಾದನಾ ವೆಚ್ಚದ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ.

►ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಿದರೂ, ಪೂರ್ಣ ಕನಿಷ್ಠ ಬೆಂಬಲ ಬೆಲೆ ಪಾವತಿಗೆ ಸರಕಾರದಿಂದ ಕ್ರಮ.

►ಎಲ್ಲ ಬೆಲೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟಿಗೆ ನಿಗದಿ.

ಆರೋಗ್ಯ

ಆರೋಗ್ಯ ರಕ್ಷಣೆ ಯೋಜನೆಯನ್ವಯ ಸುಮಾರು 10 ಕೋಟಿ ಬಡ ಮತ್ತು ಅಶಕ್ತ ಕುಟುಂಬಗಳಿಗೆ ನೆರವು. ಈ ಯೋಜನೆ ಮೂಲಕ ಕುಟುಂಬವೊಂದಕ್ಕೆ 5 ಲಕ್ಷ ರೂ.ವರೆಗೆ ಖರ್ಚು. ಇದು ಜಗತ್ತಿನ ಅತಿ ದೊಡ್ಡ ಸರಕಾರಿ ಅನುದಾನಿತ ಕಾರ್ಯಕ್ರಮ.

►2017ರ ರಾಷ್ಟ್ರೀಯ ಆರೋಗ್ಯ ನೀತಿಯನ್ವಯ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆ. ಇಂಥ ಸುಮಾರು 1.5 ಲಕ್ಷ ಕೇಂದ್ರಗಳ ಮೂಲಕ ಅಗತ್ಯ ಔಷಧಿಗಳು, ಬಾಣಂತಿ ಮತ್ತು ಶಿಶು ಸೇವೆಗಳು. ಯೋಜನೆಗೆ ಹಣಕಾಸು ಇಲಾಖೆಯಿಂದ 1,200 ಕೋಟಿ ರೂ.

►ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ 500 ರೂ.

►ಕನಿಷ್ಠ 24 ನೂತನ ಸರಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸ್ಥಾಪನೆ. ಈಗಿನ ಜಿಲ್ಲಾ ಸರಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ.

Also Read  ಆರ್.ಬಿ.ಐ ಅನುಮತಿ: 40 ಸಾವಿರ ಕೋಟಿ ರೂ ಸಾಲ ಪಡೆಯಲಿರುವ ಕರ್ನಾಟಕ ಸರಕಾರ

ಮಹಿಳೆಯರು

►ಹೊಸದಾಗಿ ನೇಮಕಗೊಂಡ ಮಹಿಳಾ ಉದ್ಯೋಗಿಗಳಿಗಾಗಿ 3 ವರ್ಷಗಳ ಕಾಲ ಸರಕಾರದಿಂದ ಭವಿಷ್ಯ ನಿಧಿಗೆ 8.3

error: Content is protected !!
Scroll to Top