ಸೆಕೆಂಡ್ ಹ್ಯಾಂಡ್ ಶೋರೂಂ ನಿಂದ ಕಾರು ಕಳವು ಪ್ರಕರಣ

crime, arrest, suspected

(ನ್ಯೂಸ್ ಕಡಬ) newskadaba.com ಸುರತ್ಕಲ್, ಜು. 25. ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಮಳಿಗೆಯಿಂದ ಎರಡು ಕಾರು, ಮೊಬೈಲ್ ಹಾಗೂ ಪ್ರಿಂಟರ್ ಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.


ಬಂಧಿತನನ್ನು ಕಿನ್ನಿಪದವು ನಿವಾಸಿ ಮುಹಮ್ಮದ್ ಶಫೀಕ್ ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 15.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸಲಕರಣೆಗಳನ್ನು ವಶಪಡಿಸಲಾಗಿದೆ.

ಜುಲೈ 12ರಂದು ರಾತ್ರಿ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಕಾರು ಮಾರ್ಟ್ ನಿಂದ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಕಳ್ಳರು ಶೋರೂಂನ ಕಛೇರಿಯ ಗ್ಲಾಸ್ ಒಡೆದು, ಡೋರ್ ನ್ನು ಸುತ್ತಿಗೆಯಿಂದ ಒಡೆದು ಒಳನುಗ್ಗಿ ಮೊಬೈಲ್, ಲ್ಯಾಪ್ ಟಾಪ್, ಪ್ರಿಂಟರ್ ಕ್ರೆಟಾ ಕಾರು ಹಾಗೂ ಸ್ವಿಫ್ಟ್ ಕಾರನ್ನು ಕಳವು ಮಾಡಿದ್ದರು. ಈ ಕುರಿತು ಕಾರ್ ಮಾರ್ಟ್ ಮಾಲಕ ಅಬೀದ್ ಅಹಮ್ಮದ್ ಸೂರಲ್ಪಾಡಿ ಎಂಬವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Also Read  ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಅನ್ಯಧರ್ಮದ ವ್ಯಕ್ತಿಗೆ ಹಲ್ಲೆ - ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ತನಿಖೆ ಕೈಗೊಂಡ ಪೊಲೀಸರು ಅಪ್ರಾಪ್ತ ಬಾಲಕನೋರ್ವ ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರನ್ನು ವಶಪಡಿಸಿ ತನಿಖೆ ನಡೆಸಿದಾಗ, ಪ್ರಧಾನ ಆರೋಪಿ ಶಫೀಕ್ ಮರಕಡ ಬಳಿಯಿರುವ ಸೂಚನೆ ಲಭಿಸಿದ್ದು, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಸ್ಟಡಿ ನೀಡಲಾಗಿರುವುದಾಗಿ ತಿಳಿದುಬಂದಿದೆ.

error: Content is protected !!
Scroll to Top