ಸುಳ್ಯ: ಅಣ್ಣನ ಹತ್ಯೆ ಪ್ರಕರಣ..!   ➤ ಬಂಧಿತ ಸಹೋದರರನ್ನು ಕರೆತಂದು ಮಹಜರು

(ನ್ಯೂಸ್ ಕಡಬ)newskadaba.com  ಸುಳ್ಯ, ಜು.18. ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿಂತೆ ಸಹೋದರರಿಂದ ಕೊಲೆಯಾದ ಉಸ್ಮಾನ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿ ಸಹೋದರರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು ಅವರನ್ನು ಘಟನಾ ಸ್ಥಳಕ್ಕೆ ಕೊಂಡೊಯ್ದು ಮಹಜರು ನಡೆಸಲಾಗಿದೆ ಎನ್ನಲಾಗಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ ಉಸ್ಮಾನ್ ರನ್ನ ಚೂರಿಯಿಂದ ಇರಿದು ಜುಲೈ 14ರಂದು ಕೊಲೆ ಮಾಡಿ ಬಳಿಕ ಅವರು ರಿಕ್ಷಾದಲ್ಲಿ ಅರಂತೋಡುವರೆಗೆ ಬಂದು ಮತ್ತೊಂದು ರಿಕ್ಷಾದಲ್ಲಿ ಸುಳ್ಯಕ್ಕೆ ಬಂದು ಕೇರಳ ಕಡೆಗೆ ಪರಾರಿಯಾಗಿದ್ದರು. ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿ ಇಂದು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

 

Scroll to Top