ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ..!

Death, deadbody, Waterfall

(ನ್ಯೂಸ್ ಕಡಬ) newskadaba.com ಕುಂಬಳೆ, ಜು. 13. ಸಾಯುವುದಾಗಿ ಗೆಳೆಯರಿಗೆ ಹೇಳಿ ಬಳಿಕ ಮೊಬೈಲ್ ಸ್ವಿಚ್ಢ್ ಆಫ್ ಮಾಡಿದ್ದ ಬಂಬ್ರಾಣ ನಿವಾಸಿ ಯುವಕ‌ನ ಮೃತದೇಹ ಮಂಗಳೂರಿನ‌ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಬಂಬ್ರಾಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜೇಶ್‌ ಕುಮಾರ್‌(28) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಸಾಗಿಸಲಾಗಿದೆ. ಮನೆಯವರು ಆಸ್ಪತ್ರೆಗೆ ತೆರಳಿ ಗುರುತು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಅತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌. ಮೃತರು ತಂದೆ, ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

Also Read  ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ➤ ಖ್ಯಾತ ಕಿರುತೆರೆ ನಟನ ಬಂಧನ

error: Content is protected !!
Scroll to Top