ಕಡಬ: ಆನೆ ದಾಳಿ- ಬೃಹತ್ ಮರ ಬಿದ್ದು 3 ವಿದ್ಯುತ್ ಕಂಬಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಜು. 13. ಆನೆ ದಾಳಿಯಿಂದಾಗಿ ಬೃಹತ್ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಹಾನಿಗೊಂಡಿರುವ ಘಟನೆ ತಾಲೂಕಿನ ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಬಾಂತಾಜೆ ಸಂಪರ್ಕ ರಸ್ತೆಯ ಬಾಂತಾಜೆ ಸಮೀಪ ನಡೆದಿದೆ.

ಇಲ್ಲಿನ ಅರಣ್ಯ ಪ್ರದೇಶದಲ್ಲಿನ ಬೃಹತ್ ಈನ್ದ್ ಮರವನ್ನು ಕಾಡಾನೆ ಉರುಳಿಸಿ ಹಾಕಿ ಪುಡಿಗೈದಿದೆ. ಮರವು ವಿದ್ಯುತ್ ತಂತಿಯ ಮೇಲೆಯೇ ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

Scroll to Top