ಜನವರಿ 31ರಂದು ಚಂದ್ರ ಗ್ರಹಣದ ಹಿನ್ನೆಲೆ ► ಕುಕ್ಕೇ ಸುಬ್ರಹ್ಮಣ್ಯದಲ್ಲಿ ದರ್ಶನ ಸಮಯದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ.27. ಇದೇ 31ರ ಬುಧವಾರ ಸಂಜೆ ಪೂರ್ಣ ಚಂದ್ರ ಗ್ರಹಣ ಸಂಭವಿಸಲಿರುವುದರಿಂದ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.31ರಂದು ಚಂದ್ರ ಗ್ರಹಣದ ನಿಮಿತ್ತ ಶ್ರೀ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ.

ಜನವರಿ 31 ಬುಧವಾರದಂದು 6.30ರಿಂದ ಬೆಳಗ್ಗೆ 9 ಗಂಟೆಯ ತನಕ ಮಾತ್ರ ದರ್ಶನ ಇರುತ್ತದೆ. ಮಧ್ಯಾಹ್ನದ ಮಹಾಪೂಜೆಯು ಬೆಳಗ್ಗೆ 8 ಗಂಟೆಗೆ ನೆರವೇರಲಿದೆ. ಬೆಳಗ್ಗೆ 9 ಗಂಟೆಯ ನಂತರ ದೇವಳದಲ್ಲಿ ಯಾವುದೇ ಸೇವೆಗಳು ನೆರವೇರುವುದಿಲ್ಲ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

Also Read  ಹರ್ಷ ಸಂಸ್ಥೆಯ ಸಂಸ್ಥಾಪಕರ ಪತ್ನಿ ಶ್ರೀ ಮತಿ ಯಶೋಧ ನಿಧನ

error: Content is protected !!
Scroll to Top