ಪಾಲ್ತಾಡು: ವ್ಯಕ್ತಿಯ ಅಪಹರಿಸಿ ಹಲ್ಲೆಗೈದ ಪ್ರಕರಣ ► ಮೂವರು ಆರೋಪಿಗಳ ಬಂಧನ



(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ.27. ಕಳೆದ ಡಿಸೆಂಬರ್ ನಲ್ಲಿ ಬೆಳ್ಳಾರೆಯ ಪಾಲ್ತಾಡು ಎಂಬಲ್ಲಿ ವ್ಯಕ್ತಿಯೋರ್ವರನ್ನು ಅಪಹರಿಸಿದ್ದ ಪ್ರಕರಣವನ್ನು ಭೇದಿಸಿರುವ ಬೆಳ್ಳಾರೆ ಪೊಲೀಸರು ಮೂವರು ಆರೋಪಗಳನ್ನು ಬಂಧಿಸಿದ್ದಾರೆ.







ಬಂಧಿತ ಆರೋಪಿಗಳನ್ನು ಮಡಿಕೇರಿ ನಿವಾಸಿಗಳಾದ ಅಯ್ಯೂಬ್, ಮಹಮ್ಮದ್ ಮುಸ್ತಫಾ, ಪವನ್ ಎಂದು ಗುರುತಿಸಲಾಗಿದೆ. ಪಾಲ್ತಾಡು ನಿವಾಸಿ ಅಬ್ಬಾಸ್ ಎಂಬವರನ್ನು ಶಾನಿಫ್ ಅವಮಾನಿಸಿದ್ದಕ್ಕೆ ಪ್ರತೀಕಾರವಾಗಿ ಅಬ್ಬಾಸ್ ರ ಪುತ್ರ ಸಿದ್ದೀಕ್ ತನ್ನ ಗೆಳೆಯರ ಮೂಲಕ ಡಿಸೆಂಬರ್ 19 ರಂದು ಶಾನಿಫ್ ರನ್ನು ಬೆಳ್ಳಾರೆಯ ಪಾಲ್ತಾಡಿನಿಂದ ಅಪಹರಿಸಿದ್ದರು. ಪ್ರಕರಣದ ಜಾಡು ಹಿಡಿದ ಬೆಳ್ಳಾರೆ ಪೊಲೀಸರು ಆರೋಪಿಗಳನ್ನು ಮಡಿಕೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.






error: Content is protected !!
Scroll to Top