ಸೀನಿಯರ್ ಛೇಂಬರ್ ಕಡಬ ಲೀಜನ್ ವತಿಯಿಂದ ವನ ಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜು.05. ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಕಡಬ ಲೀಜನ್ ವತಿಯಿಂದ ಕಡಬ ಮಿನಿ ವಿಧಾನಸೌಧದ ವಠಾರದಲ್ಲಿ ಬುಧವಾರದಂದು ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಡಬ ತಹಶೀಲ್ದಾರ್ ರಮೇಶ್ ಬಾಬು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಿನಿ ವಿಧಾನ ಸೌಧದ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ಕಡಬ ಲೀಜನ್ ಅಧ್ಯಕ್ಷರಾದ ಪಿ.ವಿಲ್ಸನ್, ಕಾರ್ಯದರ್ಶಿ ಪಿ.ಕೆ.ಚೆರಿಯನ್, ಕೋಶಾಧಿಕಾರಿ ಯೋಹನ್ನಾನ್, ಪೂರ್ವಾಧ್ಯಕ್ಷರಾದ ಟೈಟಸ್ ವರ್ಗೀಸ್, ಇ.ಸಿ.ಚೆರಿಯನ್ ಮೊದಲಾದವರು ಉಪಸ್ಥಿತರಿದ್ದರು.

Also Read  ರಥಬೀದಿ ಸರ್ಕಾರಿ ಕಾಲೇಜಿಗೆ ಸಂವಿಧಾನ ಜಾಗೃತಿ ತೇರು
error: Content is protected !!
Scroll to Top