(ನ್ಯೂಸ್ ಕಡಬ) newskadaba.com ಕಡಬ, ಜ.25. ಕಡಬ ಗ್ರಾ.ಪಂ.ವ್ಯಾಪ್ತಿಯ ಕಳಾರ ಅಂಗನವಾಡಿ ಕೇಂದ್ರದಲ್ಲಿ ಜ.24ರಂದು ಬಾಲವಿಕಾಸ ಸಮಿತಿಯ ವತಿಯಿಂದ ಬಾಲಮೇಳ ಕಾರ್ಯಕ್ರಮ, ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‍ರವರು ಉದ್ಘಾಟಿಸಿ ಮಾತನಾಡಿ ಸರಕಾರ ಅಂಗನವಾಡಿಗಳ ಮೂಲಕ ಗರ್ಭಿಣಿ ಬಾಣಂತಿಯರಿಗೆ, ಮಕ್ಕಳಿಗೆ ಅನೇಕ ಯೋಜನೆಗಳನ್ನು ಕೈಗೊಂಡಿದ್ದು ಸಮಾಜದಲ್ಲಿ ಮಹಿಳೆಯರು ಸಬಲೀಕರಣ ಹೊಂದುವುದರೊಂದಿಗೆ ಪುಟಾಣಿಗಳು ದೇಶದ ಮುಂದಿನ ಶಕ್ತಿಗಳಾಗಿ ಬೆಳೆಯಬೇಕೆಂಬ ಆಶಯದಿಂದ ಅದೆಷ್ಟೋ ಯೋಜನೆಗಳನ್ನು ನೀಡುತ್ತಿದೆ. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿಯತ್ತ ಸಾಗುವಲ್ಲಿ ನಾವೆಲ್ಲರೂ ಶ್ರಮಿಸಬೇಕೆಂದರಲ್ಲದೆ ಇಂತಹ ಸಮಾಜಮುಖಿ ಕಾರ್ಯಕರಮಗಳ ಮುಖಾಂತರ ಯೋಜನೆಗಳ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಜಿಲ್ಲಾ ಸ್ವಚ್ಚತಾ ರಾಯಬಾರಿ ಅಧ್ಯಕ್ಷ ಶೀನ ಶೆಟ್ಟಿ ಪ್ರತಿಭಾ ಸ್ತ್ರೀಶಕ್ತಿ ಸಂಘದ ವತಿಯಿಂದ ತಯಾರಿಸಲಾದ ಫಿನಾಯಿಲ್ ಮತ್ತು ಡಿಶ್‍ವಾಶ್ ಲಿಕ್ವಿಡ್‍ನ್ನು ಬಿಡುಗಡೆಗೊಳಿಸಿ ಮಾತನಾಡಿ ಆರ್ಥೀಕ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳ ಮುಖಾಂತರ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಒತ್ತು ನೀಡುವ ಕಾರ್ಯಕ್ರಮವು ದೇಶದಾದ್ಯಂತ ನಡೆಯುತ್ತಿದ್ದು ಮಹಿಳೆಯರ ಮತ್ತು ಮಕ್ಕಳ ಪೂರ್ಣ ರಕ್ಷಣೆಗೆ ಪೂರ್ಣ ಪ್ರಮಾಣದ ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತದೆ. ಆರೋಗ್ಯ ಸಮಸ್ಯೆ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಮನೆ ಮತ್ತು ಸುತ್ತಮುತ್ತ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡುವ ಕೆಲಸ ಆಗಬೇಕಾಗಿದೆ. ಸ್ತ್ರೀಶಕ್ತಿ ಅಂದರೆ ದೊಡ್ಡಶಕ್ತಿ. ಸಮಾಜದಲ್ಲಿ ಇಂದು ಮಹಿಳೆಯರು ಕೂಡ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಅಂಗನವಾಡಿ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಐಪ್ಯಾಡ್ ತಲುಪಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು ಸದ್ಯದಲ್ಲೇ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಐಪ್ಯಾಡ್ ಲಭ್ಯವಿರುವ ನಿರೀಕ್ಷೆ ಇದೆ ಎಂದರು. ಹಾಗೂ ಸಾರ್ವಜನಿಕರಿಗೆ ಪ್ಲಾಸ್ಟಿಕ್ ನಿರ್ವಹಣೆ ಮತ್ತು ಪ್ಲಾಸ್ಟಿಕ್‍ನಿಂದ ಬರಬಹುದಾದ ಗಂಭೀರ ಆರೋಗ್ಯ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕಳಾರ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಹಾಜಿ.ಕೆ.ಎಂ ಹನೀಫ್‍ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ 5 ವರ್ಷಗಳಿಂದ ಬಾಲವಿಕಾಸ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಈ ಕಾರ್ಯಕ್ರಮವು ಮಕ್ಕಳ ವೈಯಕ್ತಿಕ ವಿಕಸನ ಹಾಗೂ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತಿದೆ. ಈ ಭಾಗದ ಸ್ತ್ರೀಶಕ್ತಿ ಮಹಿಳೆಯರು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಆರ್ಥಿಕ ಸಬಲೀಕರಣ ಹೊಂದುವುದರೊಂದಿಗೆ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದ ಅವರು ನಾವು ಎಲ್ಲಾ ಜನಪ್ರತಿನಿಧಿಗಳನ್ನು ಶಾಲಾ ಸಮಿತಿ ಹಾಗು ಅಧ್ಯಾಪಕವೃಂದ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಸೇರಿಸಿಕೊಂಡು ಅಂಗನವಾಡಿ ಬಾಲವಿಕಾಸ ಸಮಿತಿ, ಪೋಷಕರೊಂದಿಗೆ ಉತ್ತಮವಾದ ಬಾಲಮೇಳ ಹಾಗೂ ಪೌಷ್ಟಿಕ ಆಹಾರ ಸಪ್ತಾಹವನ್ನು ಹಮ್ಮಿಕೊಂಡಿಲ್ಲದೆ ನಮ್ಮ ಅಂಗನವಾಡಿ ಹಾಗೂ ಶಾಲೆಗೆ ಅನುದಾನ ಒದಗಿಸಿದಲ್ಲದೆ ರಾಜ್ಯ ರಸ್ತೆಯಿಂದ ಶಾಲೆಗೆ ಬರುವ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿ ಸಹಕರಿಸಿದ ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರುಗಳು ಹಾಗೂ ವಿವಿಧ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿದ್ದು ಮುಂದೆಯೂ ತಮ್ಮ ಸಹಕಾರವನ್ನು ಬಯಸುತ್ತೇವೆ ಎಂದರು.
ಕಡಬ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕುಟ್ರುಪ್ಪಾಡಿ ತಾ.ಪಂ.ಸದಸ್ಯ ಗಣೇಶ್ ಕೈಕುರೆ, ಜಿ.ಪಂ.ಮಾಜಿ ಸದಸ್ಯೆ ಕುಮಾರಿ ವಾಸುದೇವನ್, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್, ಅಂಗನವಾಡಿ ಮೇಲ್ವಿಚಾರಕಿ ಹೇಮರಾಮ್‍ದಾಸ್ ಮಾತನಾಡಿದರು. ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಕಡಬ ಗ್ರಾ.ಪಂ.ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ, ತಾ.ಪಂ.ಮಾಜಿ ಸದಸ್ಯೆ ಮೀನಾಕ್ಷಿ ಸುಂದರ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕಡಬ ಪಂಚಾಯತ್ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಪುತ್ತೂರು ತಾಲೂಕು ಸುಗ್ರಾಮ ಉಪಾಧ್ಯಕ್ಷೆ ಕಡಬ ಗ್ರಾ.ಪಂ.ಸದಸ್ಯೆ ನೀಲಾವತಿ ಶಿವರಾಮ್, ಕಡಬ ಗ್ರಾ.ಪಂ.ಸದಸ್ಯರಾದ ಸೈಮನ್ ಸಿ.ಜೆ, ಶಾಲಿನಿಸತೀಶ್ ನಾೈಕ್, ಸುಶೀಲ, ಎ.ಎಸ್ ಶೆರೀಫ್, ಸರೋಜಿನಿ ಎಸ್.ಆಚಾರ್, ಕಳಾರ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಕೆ.ಎಚ್, ಕಳಾರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹ್‍ಮಾನ್ ಅಡ್ಕಾಡಿ, ಜೆಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ, ಉದ್ಯಮಿ ಇಸ್ಮಾಯಿಲ್ ಬಿಡಿಎಸ್, ಡೆಲ್ಮಾ ಸ್ಯಾನಿಟರಿ ಮಾಲಕ ಸಾದಿಕ್, ಕೆ.ಎಂ ಇಬ್ರಾಹಿಂ, ಸೌಂದರ್ಯ ಸ್ತ್ರೀಶಕ್ತಿ ಅಧ್ಯಕ್ಷೆ ಫಾತಿಮಾ, ಪ್ರತಿಭಾ ಸ್ತ್ರೀಶಕ್ತಿ ಅಧ್ಯಕ್ಷೆ ಜುಲೈಖ, ಕಳಾರ ಶೈನಿಂಗ್ ಸ್ಟಾರ್ ಕ್ಲಬ್‍ನ ಅಧ್ಯಕ್ಷ ಆದಂ ಅಡ್ಕಾಡಿ, ಕಡಬ ಗ್ರಾ.ಪಂ.ಸಹಾಯಕ ಲೆಕ್ಕಾಧಿಕಾರಿ ಭುವನೇಂದ್ರ ಕುಮಾರ್, ಕಡಬ ವಲಯ ಅಂಗನವಾಡಿ ಯೂನಿಯನ್ ಅಧ್ಯಕ್ಷೆ ಜೈನಾಬಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಳಾರ ಪ್ರಾ.ಶಾಲಾ ಮುಖ್ಯ ಶಿಕ್ಷಕ ಹಮೀದ್ ಮಾಸ್ಟರ್, ಸಹಶಿಕ್ಷಕ ಬಸವರಾಜು, ವಿದ್ಯಾರ್ಥಿಗಳಾದ ಸುನೈಹ, ತನ್ಮೀರ, ಸುನೈನ ಕೆ.ಪಿ, ಅನ್ಸಿಯಾ, ರಮ್ಯಾ, ಆಶಿಕ, ಸಫ್ನಾಜ್, ಮುಫಿದಾ, ಅರ್ಶಿನಾ, ಮುರ್ಷಿದಾಬಾನು, ಫಝಿಲಾ, ಮುನಿರಾ, ಮುಬಶ್ಶಿರ, ಅನಿಸಾ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷ ಕೆ.ಎಂ ಹನೀಪ್ ಸ್ವಾಗತಿಸಿ, ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಅಂಗನವಾಡಿ ಕಾರ್ಯಕರ್ತೆ ಸುಶೀಲ ವಂದಿಸಿದರು. ಕಡಬ ಗ್ರಾ.ಪಂ.ಸಿಬ್ಬಂದಿ ಹರೀಶ್ ಬೆದ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಬೋಜನದ ವ್ಯವಸ್ಥೆ ಮಾಡಲಾಯಿತು.
ಸನ್ಮಾನ: ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಜಿ.ಪಂ.ಮಾಜಿ ಸದಸ್ಯೆ ಕುಮಾರಿ ವಾಸುದೇವನ್, ತಾ.ಪಂ.ಮಾಜಿ ಸದಸ್ಯೆ ಮೀನಾಕ್ಷಿ ಸುಂದರ, ಉದ್ಯಮಿ ಇಸ್ಮಾಯಿಲ್ ಬಿ.ಡಿ.ಎಸ್ ಹಾಗೂ ಕಳಾರ ಅಂಗನವಾಡಿ ಕಾರ್ಯಕರ್ತೆ ಸುಶೀಲರನ್ನು ಬಾಲವಿಕಾಸ ಸಮಿತಿ ವತಿಯಿಂದ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ನೀಡಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.