ಲೈಟ್ ಆಫ್ ವಿಚಾರದಲ್ಲಿ ಗಲಾಟೆ   ➤ಕಾರ್ಯದರ್ಶಿಗೆ ಚೂರಿ ಇರಿತ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ . 16 . ಲೈಟ್ ಆಫ್ ವಿಚಾರದಲ್ಲಿ ಗಲಾಟೆ ನಡೆದು ಮಸೀದಿ ಕಾರ್ಯದರ್ಶಿಗೆ ಯುವಕನೊಬ್ಬ ಚೂರಿ ಇರಿದಿರುವ ಘಟನೆ ಸುರತ್ಕಲ್ ಕಾನ ಜನತಾ  ಕಾಲೋನಿ ಮಸೀದಿ ಬಳಿ ನಡೆದಿದೆ.

ಆರೋಪಿ ಸ್ಥಳೀಯ ನಿವಾಸಿ ತ್ವಾಹಿರ್ (24)) ಎಂಬಾತ ಮಸೀದಿ ಕಾರ್ಯದರ್ಶಿ ಮಹಮ್ಮದ್ ಶಾಫಿ (38) ಎಂಬವರಿಗೆ ಚೂರಿ ಇರಿದಿದ್ದು, ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top