ಬೀಜಿಂಗ್ ಏರ್ ರ್ಪೋರ್ಟ್ ನಲ್ಲಿ ಲಿಯೋನೆಲ್ ಮೆಸ್ಸಿಯವರನ್ನು ವಶಕ್ಕೆ ಪಡೆದ ಪೊಲೀಸರು..!

(ನ್ಯೂಸ್ ಕಡಬ) newskadaba.com ಬೀಜಿಂಗ್, ಜೂ. 13. ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರನ್ನು ಚೀನಾ ಪೊಲೀಸರು ಬೀಜಿಂಗ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಜೂನ್ 15 ರಂದು ಬೀಜಿಂಗ್ ನ ವರ್ಕರ್ಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೌಹಾರ್ದ ಪಂದ್ಯವನ್ನು ಆಡಲಿರುವ ಮೆಸ್ಸಿ ಅವರನ್ನು ಪಾಸ್‌ಪೋರ್ಟ್ ಹಾಗೂ ವೀಸಾ ವಿಚಾರಗಳಿಗಾಗಿ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯ ನಿಲ್ಲಿಸಿದ್ದರಿಂದ ಮುಜುಗರ ಎದುರಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಮೆಸ್ಸಿ ತನ್ನ ಅರ್ಜೆಂಟೀನದ ಪಾಸ್‌ಪೋರ್ಟ್ ಬದಲಿಗೆ ತನ್ನ ಸ್ಪ್ಯಾನಿಷ್ ಪಾಸ್‌ಪೋರ್ಟ್ ಅನ್ನು ಹೊಂದಿದ್ದರು. ಆದರೆ ಮೆಸ್ಸಿ ಅವರಲ್ಲಿ ಮಾನ್ಯವಾದ ಚೀನೀ ವೀಸಾ ಇರಲಿಲ್ಲ. ಸ್ಪ್ಯಾನಿಷ್ ಪಾಸ್‌ಪೋರ್ಟ್‌ಗಳು ಚೀನಾಕ್ಕೆ ವೀಸಾ-ಮುಕ್ತ ಪ್ರವೇಶವನ್ನು ಹೊಂದಿಲ್ಲ. ಆದರೆ ಸ್ಪ್ಯಾನಿಷ್ ಪ್ರಜೆಗಳು ವೀಸಾ ಇಲ್ಲದೆ ತೈವಾನ್‌ಗೆ ಪ್ರವೇಶಿಸಬಹುದು. ತೈವಾನ್ ಚೀನಾದ ಭಾಗವಾಗಿದೆ ಎಂದು ಮೆಸ್ಸಿ ತಪ್ಪು ಭಾವಿಸಿದ್ದರು. ಹೀಗಾಗಿ ಅವರು ವೀಸಾಗೆ ಅರ್ಜಿ ಸಲ್ಲಿಸಲಿಲ್ಲ. ಸುಮಾರು ಅರ್ಧ ಗಂಟೆಗಳ ಚರ್ಚೆಯ ನಂತರ ಸಮಸ್ಯೆಯನ್ನು ಪರಿಹರಿಸಲಾಯಿತು ಹಾಗೂ ಮೆಸ್ಸಿ ತ್ವರಿತ ವೀಸಾವನ್ನು ಪಡೆದರು. ಇದು ಅವರಿಗೆ ಸೌಹಾರ್ದ ಪಂದ್ಯ ಆಡಲು ಸಾಧ್ಯವಾಗಿಸಿದೆ.

Also Read  ಸಿದ್ದರಾಮಯ್ಯ, ಡಿಕೆಶಿಗೆ ಬಹಿರಂಗ ಕೊಲೆ ಬೆದರಿಕೆ ➤ ಪಬ್ಲಿಕ್ ಟಿವಿ ಅರುಣ್ ಬಡಿಗೇರ ವಿರುದ್ದ ದೂರು ದಾಖಲು

error: Content is protected !!
Scroll to Top