ಮಂಗಳೂರು: 1.34 ಲಕ್ಷ ರೂ. ಸ್ಯಾಲರಿಯ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಲು ಜೂ. 11ರಂದು ಕೊನೆಯ ಅವಕಾಶ

(ನ್ಯೂಸ್ ಕಡಬ) newskadaba.com  ಮಂಗಳೂರು, ಜೂ. 09. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್ ದೇಶದಲ್ಲಿ ಡ್ರೈವರ್‍ ಗಳ ನೇಮಕಾತಿಗೆ ಆಸಕ್ತ ಪುರುಷ ಹಾಗೂ ಮಹಿಳಾ ಡ್ರೈವರ್‍ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಭಾರೀ ಟ್ರಕ್ ಹಾಗೂ ಟೈಲರ್ ಡ್ರೈವಿಂಗ್ ಉದ್ಯೋಗಕ್ಕೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಜೂನ್ 11 ರೊಳಗೆ ನಗರದ ಅಶೋಕ ನಗರದಲ್ಲಿರುವ ಉರ್ವಾ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಇದೇ ಜೂನ್ 20 ಹಾಗೂ 21ರಂದು ಉದ್ಯೋಗದಾತರಿಂದ ನೇರ ಸಂದರ್ಶನ ನಡೆಯಲಿದೆ. ಮೂಲವೇತನ 1,07,000 ರೂ.ಗಳಿಂದ 1,34,000 ರೂ.ಗಳು (1200-1500 ಯುರೋಗಳು) ಪ್ರತಿ ತಿಂಗಳಿಗೆ ನೀಡಲಾಗುವುದು. ವಸತಿ, ವಿಮೆ ಇತ್ಯಾದಿ ಸವಲತ್ತಿನೊಂದಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ  ನೀಡಲಾಗುವುದು ಹಾಗೂ ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಲಹೆಗಾರರು ಮೊ.ಸಂಖ್ಯೆ 911024845, 9141584259ಗೆ ಕರೆ ಮಾಡಿ ಸಂರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಡಬ ತಾ. ಸಮಸ್ತ ಸುನ್ನಿ ಮಹಲ್ ಪೇಡರೇಷನ್ ಜಮಾಅತ್ ಪ್ರತಿನಿಧಿ ಸಂಗಮ ಮತ್ತು ಸಮಸ್ತ ಆಗಲಿದ ನೇತಾರರ ಅನುಸ್ಮರಣೆ

error: Content is protected !!
Scroll to Top