ತ್ರಿವಳಿ ತಲಾಖ್ ಆರೋಪ ಪ್ರಕರಣ ದಾಖಲು.

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ, 31. ತ್ರಿವಳಿ ತಲಾಖ್ ಆರೋಪದ ಮೇಲೆ ವ್ಯಕ್ತಿಯೋರ್ವನ ಮೇಲೆ ದೂರು ದಾಖಲಾಗಿದೆ. ನಗರದ ಮಾರ್ನಮಿಕಟ್ಟೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವ ಮುಹಮ್ಮದ್ ಹುಸೇನ್ ಹಾಗೂ ಆತನ ಹೆತ್ತವರ ಮೇಲೆ ಪತ್ನಿ ಶಬಾನಾ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಮದುವೆಯಾದ 8 ದಿನಗಳಲ್ಲಿ ಹುಸೇನ್ ಚಿನ್ನಾಭರಣಗಳನ್ನು ಕೊಂಡೊಯ್ದಿದ್ದನು. ಬಳಿಕ ಶಬಾನಾಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

Scroll to Top