ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ➤7 ಆರೋಪಿಗಳ ಅರೆಸ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.30 ಕಾಂಗ್ರೆಸ್ ಕಾರ್ಯಕರ್ತ ರವಿ ಹತ್ಯೆ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ನಂದಿನಿಲೇಔಟ್ ಠಾಣಾ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಲಗ್ಗೆರೆಯ ಪ್ರೇಮನಗರದ ಮಂಜುನಾಥ್ (42), ನ್ಯೂ ರಿಂಗ್ ರಸ್ತೆಯ ನಾಗರಾಜ್(38), ಗೋಪಾಲ್ (35), ಕಿರಣ್ ಕುಮಾರ್ (29), ಚೌಡೇಶ್ವರಿ ನಗರದ ಮಣಿಕಂಠನ್(23), ಕಾರ್ತಿಕ್ (34) ಹಾಗೂ ಬಾಬು (35) ಎಂದು ಗುರ್ತಿಸಲಾಗಿದೆ.

 

 

Scroll to Top