ಸುಳ್ಯ: KSRTC ಬಸ್‌ ಗೆ ಢಿಕ್ಕಿಯಾದ ಆಲ್ಟೋ ಕಾರು ➤ ತಪ್ಪಿದ ಅನಾಹುತ

(ನ್ಯೂಸ್ ಕಡಬ)newskadaba.com ಸುಳ್ಯ, ಮೇ.29. ಗೂನಡ್ಕದ ಸಮೀಪ ಸರ್ಕಾರಿ ಬಸ್‌ಗೆ ಹಿಂದಿನಿಂದ ಬಂದು ಆಲ್ಟೋ ಕಾರು ಗುದ್ದಿದ ಘಟನೆ ಸಂಭವಿಸಿದೆ. ಘಟನೆಯ ರಭಸಕ್ಕೆ ಅಲ್ಟೋ ಕಾರು ಬಸ್ಸಿನೊಳಗೆ ನುಗ್ಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ ಎನ್ನಲಾಗಿದೆ.


ಇನ್ನು ಘಟನೆಯಿಂದ ಯಾವುದೇ ಪ್ರಾಣ ಹಾನಿ, ಗಾಯ ಸಂಭವಿಸಿಲ್ಲ. ಬಸ್‌ ಸುಳ್ಯದಿಂದ ಕೊಯನಾಡಿಗೆ ಸಂಚರಿಸುತ್ತಿತ್ತು. ಅದೇ ಮಾರ್ಗವಾಗಿ ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಹಿಂಬದಿಯಿಂದ ಢಿಕ್ಕಿಯಾಗಿದೆ.

Scroll to Top