ನಿರುದ್ಯೋಗದಿಂದ ಮನನೊಂದು ಯುವತಿಯೋರ್ವಳು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೈಂದೂರು, ಮೇ.29. ಯುವತಿಯೋರ್ವಳು ನಿರುದ್ಯೋಗದಿಂದ ಮನನೊಂದು ಡೆತ್‌ ನೋಟ್‌ ಬರೆದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ಎಂಬಲ್ಲಿ ಸಂಭವಿಸಿದೆ.

ಕಾಲ್ತೊಡು ಗ್ರಾಮದ ಸಿಗೇಅಡಿ ನಿವಾಸಿ ಪ್ರಮೋದಾ ಶೆಟ್ಟಿ ಅವರ ಪುತ್ರಿ  ಗೌತಮಿ (22) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಎಂ.ಕಾಂ. ಪದವಿ ಪಡೆದಿದ್ದ ಗೌತಮಿಯು ಇತ್ತೀಚೆಗೆ ಬ್ಯಾಂಕ್‌ ಪರೀಕ್ಷೆ ಮತ್ತು ಕಂಪೆನಿಯಲ್ಲಿ ಉದ್ಯೋಗ ಪಡೆಯಲು ಪರೀಕ್ಷೆಗಳನ್ನು ಬರೆದರೂ ಕೂಡ ಆಕೆಗೆ ಉದ್ಯೋಗ ಸಿಗಲ್ಲಿಲ್ಲ ಹೀಗಾಗಿ ಯುವತಿ ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.

 

Scroll to Top