ಭಯೋತ್ಪಾದಕ ಸಹಚರನ ಬಂಧನ…! ➤ ಗ್ರೆನೇಡ್ ವಶಕ್ಕೆ

(ನ್ಯೂಸ್ ಕಡಬ)newskadaba.com ಜಮ್ಮು ಕಾಶ್ಮೀರ, ಮೇ.27. ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಭಯೋತ್ಪಾದಕ ಸಹಚರನನ್ನು ಬಾರಾಮುಲ್ಲಾ ಜಿಲ್ಲೆಯ ನಾಗಬಲ್ ಚಂದೂಸಾ ಪ್ರದೇಶದಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.

ಭಯೋತ್ಪಾದಕನನ್ನು ಬಾರಾಮುಲ್ಲಾದ ಲಾರಿದೂರ ಚಂದೂಸಾ ನಿವಾಸಿ ಮೊಹಮ್ಮದ್ ಅಶ್ರಫ್ ಮಿರ್ ಎಂದು ಗುರುತಿಸಲಾಗಿದೆ. ಆತನಿಗಾಗಿ ಹುಡುಕಾಟ ನಡೆಸಿದ ಸಮಯದಲ್ಲಿ  ಪೊಲೀಸರು ಅವನ ಬಳಿ ಇದ್ದ  ಗ್ರೆನೇಡ್ ಅನ್ನು ವಶಪಡಿಸಿಕೊಂಡರು.  ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ  ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ  ಪ್ರಕರಣ ಚಂದೂಸಾ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.

Also Read  ಕಟ್ಟಿಗೆಗಾಗಿ ಗುಡ್ಡೆಗೆ ಹೋದ ವ್ಯಕ್ತಿ ಹೆಜ್ಜೇನು ಕಡಿದು ಮೃತ್ಯು

error: Content is protected !!
Scroll to Top