ಪೊಲೀಸರ ಮೇಲೆ ದ್ವಿಚಕ್ರ ವಾಹನ ಹತ್ತಿಸಲು ಯತ್ನಿಸಿದ ಅಪರಿಚಿತರು.! ➤ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಕುಂದಾಪುರ,ಮೇ.25  ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ದ್ವಿಚಕ್ರ ವಾಹನವನ್ನು ಡಿಕ್ಕಿ ಹೊಡೆಸಲು ಯತ್ನಿಸಿದ ಅಪರಿಚಿತ ವ್ಯಕ್ತಿಗಳು ವಾಹನದೊಂದಿಗೆ ಪರಾರಿಯಾದ ಘಟನೆ ಸಾಲಿಗ್ರಾಮದಲ್ಲಿ ನಡೆದಿದೆ.

ಕೋಟ ಪೊಲೀಸ್ ಠಾಣೆಯ ತನಿಖಾ ವಿಭಾಗದ ಸಬ್ ಇನ್ಸ್‌ಪೆಕ್ಟರ್ ನರೇಂದ್ರ ಅವರು ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಬಂದಿಯೊಂದಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು. ನಾಲ್ವರು ಬೈಕ್ ಸವಾರರು ಅತಿ ವೇಗವಾಗಿ ಬರುತ್ತಿದ್ದರು, ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಪೊಲೀಸರು ನಿಲ್ಲಿಸುವ ಸೂಚಿಸಿದರೂ ಕೂಡ ಬೈಕಿನ ವೇಗ ಹೆಚ್ಚಿಸಿ ಪೋಲೀಸರ ಮೈ ಮೇಲೆರಗಿ ಬಂದಂತೆ ಚಲಾಯಿಸಿಕೊಂಡು ಪರಾರಿಯಾದರು. ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

 

 

Scroll to Top