ವಿಧಾನಸಭೆಯ ಸ್ಪೀಕರ್ ಆಗಿ ಯುಟಿ ಖಾದರ್ ಅವಿರೋಧವಾಗಿ ಆಯ್ಕೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮೇ.24. ವಿಧಾನಸಭೆ ನೂತನ ಸ್ಪೀಕರ್‌ ಆಗಿ ಯುಟಿ ಖಾದರ್‌ ಅವಿರೋಧ ಆಯ್ಕೆಯಾಗಿದ್ದಾರೆ.

ಸ್ಪೀಕರ್‌ ಸ್ಥಾನಕ್ಕೆ ಯುಟಿ ಖಾದರ್‌ ಹೈಕಮಾಂಡ್ ಸೂಚನೆ ಮೇರೆಗೆ ನಾಮಪತ್ರವನ್ನು ಸಲ್ಲಿಸಿದ್ದರು. ಬೇರೆ ಯಾರೂ ಕೂಡ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ. ಇದರಿಂದಾಗಿ ಖಾದರ್ ಇಂದು ಅಧಿಕೃತವಾಗಿ ಸ್ಪೀಕರ್‌ ಆಗಿ ಅಧಿಕಾರ ಹಂಗಾಮಿ ಸ್ಪೀಕರ್‌ ಆರ್.ವಿ ದೇಶಪಾಂಡೆ ಅವರಿಂದ ಸ್ವೀಕಾರ ಮಾಡಿದರು.

ನೂತನ ಸ್ಪೀಕರ್‌ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಅಭಿನಂದನೆ ಸಲ್ಲಿಸಿದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಯುಟಿ ಖಾದರ್‌ ಅವರು ಹೈಕಮಾಂಡ್‌ ಮತ್ತು ಸಿಎಂ, ಡಿಸಿಎಂ ಮನವೊಲಿಕೆಯಿಂದ ಸ್ಪೀಕರ್‌ ಆಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

 

Scroll to Top