ಮಂಗಳೂರು: ಸಿಇಟಿ ಪರೀಕ್ಷೆ ಆರಂಭ !!

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.20. ಎಂಜಿನಿಯರಿಂಗ್ ಮತ್ತು ಬಿಎಸ್ಸಿ ನರ್ಸಿಂಗ್ ವೃತ್ತಿಪರ ಕೋರ್ಸ್‌ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ದಕ್ಷಿಣ ಕನ್ನಡ , ಉಡುಪಿ ಉಭಯ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಇಂದು ಹಾಗೂ ನಾಳೆ ಪರೀಕ್ಷೆ ನಡೆಯಲಿದ್ದು ದ.ಕ.ದಲ್ಲಿ 28 ಕೇಂದ್ರಗಳಲ್ಲಿ 16,113 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಉಡುಪಿಯಲ್ಲಿ 12 ಕೇಂದ್ರಗಳಲ್ಲಿ 5,712 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎರಡೂ ಜಿಲ್ಲೆಗಳ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಈ ಹಿಂದೆ ತಿಳಿಸಿದ್ದಾರೆ.

Also Read  ಮಂಗಳೂರು: ಯು.ಟಿ ಖಾದರ್ ನಿಂದ ಕಲಾಪರ್ಬ ದ ಲಾಂಛನ, ಕರಪತ್ರ ಬಿಡುಗಡೆ

 

error: Content is protected !!
Scroll to Top