ಸುರತ್ಕಲ್: ಬಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

(ನ್ಯೂಸ್ ಕಡಬ)newskadaba.com ಮೀನುಗಾರ ಬಲೆ ಹಾಕುತ್ತಿದ್ದ  ವೇಳೆ  ಸಮುದ್ರದಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಜಯರಾಜ್ (46 ವರ್ಷ) ಮೀನುಗಾರ ಬಲೆ ಹಾಕುತ್ತಿದ್ದ  ವೇಳೆ  ಸಮುದ್ರದಲ್ಲಿ ಮುಳುಗಿ ಮೃತ ಪಟ್ಟಿದ್ದು,  ಸಮುದ್ರಕ್ಕೆ ಹಾಕಿದ ಬಲೆ ಕಾಲಿಗೆ ಸಿಲುಕಿದ್ದಲ್ಲದೆ, ಸಮುದ್ರದ ಅಲೆ ಅಪ್ಪಳಿಸಿ ಮುಳುಗಿದರು ಎನ್ನಲಾಗಿದೆ.

ಅಲ್ಲಿ ಇದ್ದ ಮೀನುಗಾರ ತಕ್ಷಣ ಸ್ಥಳೀಯರಿಗೆ ತಿಳಿಸಿದ್ದು, ಸಹಾಯಕ್ಕೆ ಧಾವಿಸಿದ ಸ್ಥಳೀಯರು ಜಯರಾಜ್ ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ  ಕೂಡ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.ಇನ್ನೂ  ಮೃತ ಜಯರಾಜ್  ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

 

Scroll to Top