ವಿಮಾನದಲ್ಲಿ ಬೀಡಿ ಸೇದಲು ಮುಂದಾದ ಕೂಲಿ ಕಾರ್ಮಿಕ.!➤ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.17 ಕೂಲಿ ಕಾರ್ಮಿಕ, ವಿಮಾನದಲ್ಲೂ ಬೀಡಿ ಸೇದಲು ಯತ್ನಿಸಿದ್ದಾನೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ರಾಜಸ್ಥಾನ ರಾಜ್ಯದ ಎಸ್.ಪ್ರವೀಣ್ ಕುಮಾರ್ ಎನ್ನುವವರು ವಿಮಾನದಲ್ಲಿ ಬೀಡಿ ಸೇದಲು ಯತ್ನಿಸಿದ್ದು ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿ ಆಕ್ಷೇಪಿಸಿದ್ದಾರೆ. ನಂತರ ಇವರ ವರ್ತನೆ ಬಗ್ಗೆ ಮೇಲಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ.

 

 

 

 

Scroll to Top