ಮಂಗಳೂರು: ಸಿಟಿ ಬಸ್‌‌ಗಳ ನಡುವೆ ಸರಣಿ ಅಪಘಾತ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.16. ನಗರದ ಹಂಪನಕಟ್ಟೆ ಸಿಗ್ನಲ್ ಬಳಿ ಮೂರು ಸಿಟಿ ಬಸ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.


ಸ್ಟೇಟ್ ಬ್ಯಾಂಕ್ ನಿಂದ ಕುಂಜತ್ತಬೈಲ್ ಕಡೆಗೆ ಹೋಗುತ್ತಿದ್ದ ಬಸ್, ತಲಪಾಡಿ‌ ಕಡೆಗೆ ಹೋಗುತ್ತಿದ್ದ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ತಲಪಾಡಿಗೆ ಹೋಗುತ್ತಿದ್ದ ಬಸ್, ಅದರ ಮುಂಭಾಗದಲ್ಲಿದ್ದ ನೀರುಮಾರ್ಗದ‌ ಬಸ್ಸಿನ ಹಿಂಭಾಗಕ್ಕೆ ಬಡಿದಿದೆ.


ಇನ್ನು ಘಟನೆಯಲ್ಲಿ ಮೂರು ಬಸ್ ಗಳು ಜಖಂಗೊಂಡಿದ್ದು, ಕುಂಜತ್ತಬೈಲ್‌ನ‌ ಬಸ್ ನ ಮುಂಭಾಗ ಮತ್ತು ತಲಪಾಡಿ ಬಸ್ ನ‌ ಹಿಂಭಾಗ ಮತ್ತು ಮುಂಭಾಗದ ಗಾಜುಗಳು‌ ಪುಡಿಯಾಗಿದ್ದು, ಹಾನಿ ಸಂಭವಿಸಿದೆ. ನೀರುಮಾರ್ಗ ಬಸ್ ನ ಹಿಂಭಾಗಕ್ಕೂ ಹಾನಿಯಾಗಿದೆ.

 

Scroll to Top