ಪಾವಗಡದ ಸೋಲಾರ್ ಪಾರ್ಕನ್ನು ಕಂಡು ಮೋದಿಗೆ ಗಾಬರಿಯಾಗಿದೆ ► ಪ್ರಧಾನಿಯ ಕಾಳೆಲೆದ ಇಂಧನ ಸಚಿವ ಡಿ.ಕೆ.ಶಿವಕುಮಾರ್



(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಜ.17. ತುಮಕೂರಿನ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಕಂಡು ಪ್ರಧಾನಿ ಮೋದಿ ಗಾಬರಿಯಾಗಿದ್ದಾರೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪಂಚ್ ನೀಡಿದ್ದಾರೆ.





ಅವರು ಚಿತ್ರದುರ್ಗದ ಹೊಸದುರ್ಗದಲ್ಲಿ ವಿದ್ಯುತ್ ಉಪಕೇಂದ್ರಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಜಮೀನು ಖರೀದಿ ಮಾಡದೇ ಯಾವುದೇ ಭೂ ಸ್ವಾಧೀನವೂ ಇಲ್ಲದೆ ಸುಮಾರು 12 ಸಾವಿರ ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕನ್ನು ನೋಡಿ ಪ್ರಧಾನಿ ಮೋದಿ ಅವರೇ ಗಾಬರಿಯಾಗಿದ್ದಾರೆ ಎಂದರು. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದನ್ನು ಲಾಲಿಪಪ್ ಎಂದಿರುವ ಕೇಂದ್ರ ಸರ್ಕಾರಕ್ಕೆ ಸಾಲ ಮನ್ನಾ ಮಾಡಲು ಮನಸ್ಸಿಲ್ಲ. 50 ಸಾವಿರವನ್ನು ಲಾಲಿಪಪ್ ಎಂದಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ನೀವು ಕನಿಷ್ಟ ಚಾಕೊಲೇಟ್ ಆದರೂ ನೀಡಿ ಎಂದು ಛೇಡಿಸಿದರು.






error: Content is protected !!
Scroll to Top