ಸುಬ್ರಹ್ಮಣ್ಯ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಮೃತ್ಯು

 (ನ್ಯೂಸ್ ಕಡಬ) newskadaba.com. ಸುಬ್ರಹ್ಮಣ್ಯ, ಮೇ.9. ಸುಬ್ರಹ್ಮಣ್ಯ ಸಮೀಪದ  ಕೇನ್ಯ ಕಣ್ಕಲ್ ಎಂಬ ಹೊಳೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟ ಘಟನೆ ನಡೆದಿದೆ.  ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ (15) ಮತ್ತು ಅವಂತಿಕಾ (11) ಎಂಬ ಸಹೋದರಿಯರು ಮೃತಪಟ್ಟವರು.

ಇವರು ಬೆಂಗಳೂರಿನಲ್ಲಿ ವಾಸವಿದ್ದೂ, ಊರಿನಲ್ಲಿ ನಡೆಯುವ ಕಾರ್ಯಕ್ರಮವೊಂದರ ನಿಮಿತ್ತ ಬಳ್ಪಕ್ಕೆ ಬಂದಿದ್ದರು ಎನ್ನಲಾಗಿದೆ. ಅಗ್ನಿಶಾಮಕ ದಳದಿಂದ ಹುಡುಕಾಟ ನಡೆಯುತ್ತಿದ್ದೂ, ಇಬ್ಬರ ಮೃತದೇಹಗಳೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Scroll to Top