ಉಪ್ಪಿನಂಗಡಿ: ಚರ್ಚ್ ನಲ್ಲಿ ಕಳ್ಳತನ ➤ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com. ಉಪ್ಪಿನಂಗಡಿ,ಮೇ.6. ಶಿರಾಡಿ ಗ್ರಾಮದ ಸೈಂಟ್ ಪೀಟರ್ಸ್ ಮತ್ತು ಸೈಂಟ್ ಪಾಲ್ಸ್ ಜಾಕೋಬೈಟ್ ಸಿರಿಯನ್ ಚರ್ಚ್‌ಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಚರ್ಚ್ ಕಚೇರಿಗೆ ನುಗ್ಗಿದ ಕಳ್ಳರು ಬೀಗ ಒಡೆದು ಒಳ  ಬೀರುವಿನಲ್ಲಿಟ್ಟಿದ್ದ 12 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಹಾಗೂ 15,880 ರೂ.ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ  ಜನರೇಟರ್ ಶೆಡ್ ನ ಲಾಕರ್ ಒಡೆದು 35 ಲೀಟರ್ ಡೀಸೆಲ್ ಕಳ್ಳತನ ಮಾಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Scroll to Top