ವಿಚಾರಣೆಗೆ ಹಾಜರಾಗುವಂತೆ ವಿನಯ್ ಕುಲಕರ್ಣಿ ಆಪ್ತನಿಗೆ ಐಟಿ ಇಲಾಖೆ ನೋಟಿಸ್

(ನ್ಯೂಸ್ ಕಡಬ) newskadaba.com. ಧಾರವಾಡ, ಮೇ.6. ವಿನಯ್​ ಕುಲಕರ್ಣಿ ಆಪ್ತರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಏಗನಗೌಡರ್​ಗೆ ದಾಖಲೆ ಸಮೇತ ಕಚೇರಿ ಬರುವಂತೆ ನೋಟಿಸ್ ನೀಡಲಾಗಿದೆ. ಮಾಜಿ ಸಚಿವ ವಿನಯ್​ ಕುಲಕರ್ಣಿಯ‌ ಮತ್ತೊಬ್ಬ ಆಪ್ತನಿಗೆ ಐಟಿ ಇಲಾಖೆ ನೋಟಿಸ್​ ನೀಡಿದೆ.

ಇಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ಐಟಿ ಕಚೇರಿಗೆ ಆಗಮಿಸುವಂತೆ ವಿನಯ‌್​ ಪರ ಚುನಾವಣಾ ಪ್ರಚಾರದಲ್ಲಿ ಓಡಾಡುತ್ತಿದ್ದ ಅರವಿಂದ ಏಗನಗೌಡರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

error: Content is protected !!
Scroll to Top