ಮನೆಯಿಂದಲೇ ಮತದಾನ ಮಾಡಿದ 82ರ ವೃದ್ಧೆ ➤ ಮತದಾನ ಮಾಡಿ ಅರ್ಧ ಗಂಟೆಯಲ್ಲಿ ಮೃತ್ಯು.!

(ನ್ಯೂಸ್ ಕಡಬ)Newskadaba.com ರಾಯಚೂರು,ಮೇ.05 ಮನುಷ್ಯನಿಗೆ ಸಾವು ಯಾವಾಗ ಬರುತ್ತದೆ ಎಂದು ಹೇಳುವುದೇ ಕಷ್ಟ. ಅದರಲ್ಲೂ ಅನಾರೋಗ್ಯ ಹೊಂದಿರುವ ವಯೋವೃದ್ಧರು ತಮ್ಮ ಅಂತಿಮ ದಿನ ಎಣಿಸುತ್ತಿರುತ್ತಾರೆ. ಇಲ್ಲೊಬ್ಬ ವೃದ್ಧೆ ಮತದಾನ ಮಾಡಿ ಕೇವಲ ಅರ್ಧ ಗಂಟೆಯಲ್ಲಿಯೇ ಮೃತಪಟ್ಟಿದ್ದಾರೆ.

ವಿಧಾನಸಭೆ ಚುಣಾವಣೆ ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿಲಾಗಿತ್ತು.ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಅರ್ಧ ಗಂಟೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಅಲಬನೂರು ಗ್ರಾಮದಲ್ಲಿ ನಡೆದಿದೆ.ಮಂಗಮ್ಮ ರಾಜಪ್ಪ (82) ಮತದಾನ ಮಾಡಿ ಮೃತಪಟ್ಟವರು.

Also Read  ಸರಕಾರಿ ಹುದ್ದೆ ಕೊಡಿಸುವುದಾಗಿ ವಂಚನೆ ➤ ದೂರು ದಾಖಲು

 

 

error: Content is protected !!
Scroll to Top