ಚುನಾವಣೆಯಲ್ಲಿ ಗೆಲ್ಲಲು ತನ್ನನ್ನೇ ತಾನೇ ಕಿಡ್ನ್ಯಾಪ್ ಮಾಡಿಕೊಳ್ಳಲು ಮುಂದಾದ ಜೆಡಿಎಸ್ ಅಭ್ಯರ್ಥಿ..!​

(ನ್ಯೂಸ್ ಕಡಬ)Newskadaba.com ಬೆಂಗಳೂರು ,ಮೇ.03 ಚುನಾವಣೆಯಲ್ಲಿ ಗೆಲ್ಲಲು ಜೆಡಿಎಸ್ ಅಭ್ಯರ್ಥಿ ತನ್ನನ್ನೇ ತಾನೇ ಅಪಹರಣ ಮಾಡಿಸಿಕೊಳ್ಳಲು ಮುಂದಾಗಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ. ಯಲಹಂಕ ಜೆಡಿಎಸ್​ ಅಭ್ಯರ್ಥಿ ಮುನೇಗೌಡ ಕಿಡ್ನ್ಯಾಪ್ ಸ್ಕೆಚ್​ ಬಹಿರಂಗಗೊಂಡಿದೆ.

ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಮುನೇಗೌಡ ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಕೊಳ್ಳಲು ಮುಂದಾಗಿದ್ದರು. ತಾನು ಕಿಡ್ನ್ಯಾಪ್ ಆಗಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಮೇಲೆ ಹಾಕಿ ಯಲಹಂಕ ಕ್ಷೇತ್ರದಲ್ಲಿ ಗಲಾಟೆ ಮಾಡಿಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.ಅಪಹರಣ, ಗಲಾಟೆ ಎಬ್ಬಿಸೋ ಬಗ್ಗೆ ನಡೆದ ಮಾತುಕತೆ ವಿಡಿಯೋ ಲೀಕ್ ಆಗಿದೆ.

 

 

 

Scroll to Top