(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.29. ಖಾಸಗಿ ಕಾಲೇಜೊಂದರಲ್ಲಿ ನೀಟ್ ಓದಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ಕಡಿಮೆ ಅಂಕ ಬಂದಿದ್ದರಿಂದ ನೊಂದು ಆತ್ಮಹತ್ಯೆಗೆ ಮಾಡಿಕೊಂಡ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಿವಾಸಿಯಾದ ಉಮೆ ಉಜ್ಮಾ.ಎಸ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿಯ ಕುವೆಟ್ಟು ಸಮೀಪದ ಖಾಸಗಿ ಕಾಲೇಜಿನಲ್ಲಿ ಮೆಡಿಕಲ್ ಕೋರ್ಸ್ ಪ್ರವೇಶ ಪಡೆಯಲು ಲಾಂಗ್ ಟರ್ಮ್ ನೀಟ್ ಓದುತ್ತಿದ್ದು, ಇಲ್ಲಿಯ ಕಾಲೇಜು ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು. ಏ.28ರಂದು ಉಮೆ ತನ್ನ ಕೊಠಡಿಯಿಂದ ಹೊರಗೆ ಹೋಗಿ ಕಟ್ಟಡದ ಮೇಲಿನಿಂದ ಜಿಗಿದಿದ್ದಾಳೆ. ಈ ಹಿಂದೆ ನಡೆದ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ವಿಚಾರವಾಗಿ ಅಥವಾ ಮುಂಬರುವ ನೀಟ್ ಪರೀಕ್ಷೆ ಎದುರಿಸುವ ಆತಂಕದಿಂದ ಉಮೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.